ಕೇಂದ್ರ ಸಚಿವರಿಗೆ ಗುರುಪೂರ್ಣಿಮೆ ಸನ್ಮಾನ

GURUPURNIME JOSHI
Published on

ಹುಬ್ಬಳ್ಳಿ: ಗುರು ಪೂರ್ಣಿಮೆ ನಿಮಿತ್ತ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಬಿಜೆಪಿ ಪ್ರಮುಖರು ನಗರದ ಕೇಶಾಪುರದ ಮಯೂರ್ ಬಡಾವಣೆಯಲ್ಲಿರುವ ಸಚಿವರ ಗೃಹ ಕಚೇರಿಯಲ್ಲಿ ಸನ್ಮಾನಿಸಿದರು.

ಪಕ್ಷದ ಪ್ರಮುಖರಾದ ನಾರಾಯಣ ಜರತಾಘರ, ವಿಎಕೆ ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾಟವೆ, ವಿನಾಯಕ ಲದವಾ, ಪ್ರವೀಣ ಪವಾರ, ಪ್ರವೀಣ ಕುಬಸದ, ಮಂಜುನಾಥ ಊಟವಾಲೆ, ಹರೀಶ ಹಳ್ಳಿಕೇರಿ, ಸಚಿನ ಕಾಟವೆ, ಇತರರು ಸಚಿವರಿಗೆ ಶಾಲು ಹೊದಿಸಿ ಹೂ ಗುಚ್ಚ ನೀಡಿ ಶುಭ ಹಾರೈಸಿದರು.

ವಿಎಕೆ ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾಟವೆ ಮಾತನಾಡಿ, ನಾವು ಇಂದು ನಮ್ಮ ಕಾಲ ಮೇಲೆ ನಿಲ್ಲಬೇಕಾದರೆ ನಮಗೆ ಮೊದಲಿಗೆ ತಾಯಿ, ನಂತರ ಗುರುವಿನ ಆಶೀರ್ವಾದ ಬೇಕು. ಗುರುವಿಗೆ ನಮಿಸುವ ಈ ದಿನ ಅತ್ಯಂತ ವಿಶೇಷವಾಗಿದೆ. ಜೀವನಕ್ಕೆ ಮಾರ್ಗದರ್ಶಕರಾಗಿರುವ ಗುರುವನ್ನು ಭಕ್ತಿಯಿಂದ ಸ್ಮರಿಸುವುದು ನಮ್ಮ ಪರಂಪರೆ. ಸಚಿವರಾದ ಪ್ರಲ್ಹಾದ ಜೋಶಿ ಅವರು ನಮಗೆ ಗುರುಗಳಾಗಿದ್ದಾರೆ ಎಂದರು.

ರಾಹುಲ ಬಂಕಾಪುರ, ನಾರಾಯಣ ಹಬೀಬ, ಅಮೃತ ಪವಾರ, ಕಾರ್ತಿಕ ಪವಾರ, ಆಕಾಶ ರಂಗ್ರೆಜ್, ಸುಜನ ಹಜಾರೆ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net