10 ರಂದು ಗುರುಪೂರ್ಣಿಮ ಮಹೋತ್ಸವ

ಡಾ. ಸ್ಿ.ಎನ್.ಮಂಜುನಾಥ್
ಡಾ. ಸ್ಿ.ಎನ್.ಮಂಜುನಾಥ್
Published on

ಚನ್ನರಾಯಪಟ್ಟಣ: ಲೋಕ ಕಲ್ಯಾಣಾರ್ಥ ಹಾಗೂ ಜನತೆ ಒಳಿತಿಗಾಗಿ ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮ ಅಂಗವಾಗಿ ಹೋಮ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಸಾಯಿಮಂದಿರ ಮುಖ್ಯಸ್ಥ ಪ್ರಭಾ ಕಾಚೇನಹಳ್ಳಿ ತಿಳಿಸಿದರು.

ಜು.10 ರಂದು ಗುರುಪೂರ್ಣಿಮ ಪ್ರಯುಕ್ತ ಗುರುಪೂರ್ಣಿಮ ಮಹೋತ್ಸವವನ್ನು ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಆಯೋಜಿಸಲಾಗಿದೆ. ಜು.9ರಂದು ಬೆಳಗ್ಗ್ಗೆ 9 ಗಂಟೆಗೆ ಸುಧೀರ್ ಶರ್ಮಾ ಮತ್ತು ತಂಡದವರಿಂದ ಹೋಮ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, 1 ಗಂಟೆಗೆ ಅನ್ನದಾನ ಏರ್ಪಡಿಸಲಾಗಿದೆ. ಜು.10ರಂದು 4.30ಕ್ಕೆ ಶ್ರೀ ಸಾಯಿ ಬಾಬಾಗೆ ಕಾಕಡ ಆರತಿ, 5 ಕ್ಕೆ ಅಭಿಷೇಕ, 6ಕ್ಕೆ ವಿಶೇಷ ಅಲಂಕಾರದ ಬಳಿಕ ಧೂಪಾರತಿ, ರಾತ್ರಿ 9ಕ್ಕೆ ಶೇಜಾರತಿ ನೇರವೇರಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿದ್ದರು.

ಪಟ್ಟಣದ ವಿವಿಧ ಮಹಿಳಾ ಭಜನಾ ಮಂಡಳಿಗಳಿಂದ ಬೆಳಗ್ಗೆ 9ರಿಂದ ರಾತ್ರಿ 9 ರವರೆಗೆ ಭಜನಾ ಕಾರ್ಯಕ್ರಮ ಮತ್ತು ಸಂಜೆ ನೂತನ ವಾದ್ಯ ವೃಂದದವರಿಂದ ವಿಶೇಷ ಸಂಗೀತ ಗೋಷ್ಠಿ ಏರ್ಪಡಿಸಲಾಗಿದೆ. ಮಂದಿರದಲ್ಲಿ ಬೆಳಗ್ಗೆ 7 ರಿಂದ ರಾತ್ರಿ 11 ಗಂಟೆವರೆಗೆ ಸಾಯಿಬಾಬಾ ದರ್ಶನಕ್ಕೆ ಅವಕಾಶವಿದ್ದು, ಭಕ್ತರಿಗೆ ಊಟ ಹಾಗೂ ತಿಂಡಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು, ತಾಲೂಕಿನ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಸಾಯಿಬಾಬಾ ಭಕ್ತರು ಕಾರ್ಯಕ್ರಮಕ್ಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net