ನಿರಂಜನ ಕುಟೀರದಲ್ಲಿ ಗುರುಪೂರ್ಣಿಮೆ ಸಂಭ್ರಮ

3mnd-6
Published on

ಮಂಡ್ಯ: ನಗರದ ಹೊರವಲಯದ ಅಸಿಟೇಟ್‌ಟೌನ್‌ನ ಶ್ರೀ ನಿರಂಜನ ಕುಟೀರದಲ್ಲಿ ಸೋಮವಾರ ದತ್ತಾತೇಯ ಸೇವಾ ಟ್ರಸ್ಟ್ ವತಿಯಿಂದ ಗುರುಪೂರ್ಣಿಮೆಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಗುರುಪೂರ್ಣಿಮೆ ಅಂಗವಾಗಿ ಬೆಳಗ್ಗೆಯಿಂದಲೇ ಧಾರ್ಮಿಕ ಕೈಂಕರ್ಯ ನಡೆದವು. ದತ್ತನಾಮ ಸಂಕೀರ್ತನೆ, ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ, ಗುರುನಾಮ ಸಂಕೀರ್ತನೆ, ಪಾದುಕಾ ಪೂಜೆ, ಮಹಾಮಂಗಳಾರತಿ, ಮಿಶ್ರ ಭಜನೆ ಮಂಗಳಾರತಿ ಕಾರ್ಯಕ್ರಮಗಳು ನಡೆದವು.

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಜನ ಭಕ್ತರ ಕುಟೀರಕ್ಕೆ ಧಾವಿಸಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರಲ್ಲದೆ, ಭಜನೆಯಲ್ಲಿ ಪಾಲ್ಗೊಂಡು ಭಕ್ತಿ ಭಾವ ಮೆರೆದರು. ಅಂತೆಯೇ ಭಾಗವಹಿಸಿದ್ದ ಸಹಸ್ರಾರು ಜನರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net