

ಹುಬ್ಬಳ್ಳಿ: ತಾಲೂಕಿನ ವರೂರ ಗ್ರಾಮದಲ್ಲಿ ಜ. 2ರಂದು ಬೆಳಗ್ಗೆ 10 ಗಂಟೆಗೆ ವಿಜಯಪುರದ ಜ್ಞಾನ ಯೋಗಾಶ್ರಮದ ಜ್ಞಾನ ಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರಿಗೆ ಗುರು ನಮನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವುದು, ಗೀತ ನಮನ ಜೊತೆಗೆ ಸಾಮೂಹಿಕವಾಗಿ ಪುಷ್ಪ ನಮನ ಅರ್ಪಿಸಲಾಗುವುದು ಎಂದು ಸಿದ್ಧೇಶ್ವರ ಸ್ವಾಮಿಗಳವರ ಜ್ಞಾನ ಯೋಗಾಶ್ರಮ ವರೂರ, ಸತ್ಸಂಗ ಸಮೂಹ ಅಧ್ಯಕ್ಷ ಎಚ್.ವೈ. ಬಡಿಗೇರ ಪ್ರಕಟಣೆ ತಿಳಿಸಿದ್ದಾರೆ.