

ಬೆಳಗಾವಿ: ಜೀವನದ ಪ್ರತಿ ಹೆಜ್ಜೆ ಹೆಜ್ಜೆಗೂ ನಮ್ಮನ್ನು ತೀಡುತ್ತ, ಮನದ ಅಂಧಕಾರ ತೊಲಗಿಸಿ ಾನದ ಬೆಳಕನ್ನು ನೀಡುವವನೇ ನಿಜವಾದ ಗುರು ಎಂದು ಧಾರವಾಡ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.
ಇಲ್ಲಿನ ಶಿವಬಸವ ನಗರದ ಪ್ರಭುದೇವ ಸಭಾಗೃಹದಲ್ಲಿ ನಾಗನೂರು ರುದ್ರಾ ಮಠ ಹಾಗೂ ಪ್ರಭುದೇವ ಪ್ರತಿಷ್ಠಾನ ಮಾತೃ ಮಂಡಳಿ ಸಹಯೋಗದಲ್ಲಿ ಗುರುಪೂರ್ಣಿಮೆ ನಿಮಿತ್ತ ಈಚೆಗೆ ಜರುಗಿದ ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ತನಗೆ ಚಕ್ರವರ್ತಿ ಎಂಬ ಬಿರುದು, ಸಿಂಹಾಸನ ಎಲ್ಲವೂ ತಂದೆಯಿಂದಲೇ ದೊರೆತಿದ್ದರೂ ಆತ ತಂದೆಗಿಂತ ಹೆಚ್ಚು ತನ್ನ ಗುರುವಾದ ಅರಿಸ್ಟಾಟಲ್ಗೆ ಶಿರಬಾಗಿದ. ಹಾಗೆಯೇ ಸ್ವಾಮಿ ವಿವೇಕಾನಂದರು ಭಾರತದ ಆಧ್ಯಾತ್ಮಿಕತೆಯ ಶ್ರೇಷ್ಠತೆಯನ್ನು ಜಗತ್ತಿಗೆ ಪರಿಚಯಿಸಿ ವಿಶ್ವವಿಖ್ಯಾತಿ ಗಳಿಸಿದರೂ ತನ್ನ ಸಾಧನೆಗೆ ಗುರು ರಾಮಕೃಷ್ಣ ಪರಮಹಂಸರೇ ಕಾರಣವೆಂದರು. ಹೀಗೆ ಸಮಾಜದಲ್ಲಿ ಗುರುವಿನ ಪಾತ್ರ ಹಿರಿದಾಗಿದೆ ಎಂದರು.
ಧಾರವಾಡದ ಹಿರಿಯ ಸಾಹಿತಿ ಡಾ. ಸಂಗಮನಾಥ ಲೋಕಾಪುರ ಮಾತನಾಡಿ, ಧಾರವಾಡದ ಮುರುಘಾ ಮಠದಲ್ಲಿ ಮೃತ್ಯುಂಜಯ ಸ್ವಾಮಿಗಳು ಉಚಿತ ವಿದ್ಯಾರ್ಥಿ ಪ್ರಸಾದ ನಿಲಯ ಪ್ರಾರಂಭಿಸದಿದ್ದರೆ ನಗರದಲ್ಲಿ ಕಲೆ, ಸಂಗೀತ, ಸಾಹಿತ್ಯ, ಚಳವಳಿ, ಹೋರಾಟ ಹುಟ್ಟುತ್ತಲೇ ಇರಲಿಲ್ಲ. ಇವೆಲ್ಲವುಗಳಿಗೆ ಪ್ರೇರಣೆ ನೀಡಿ ಸಮಾಜವನ್ನು ಮುನ್ನಡೆಸಿದ ಡಾ. ಮಲ್ಲಿಕಾರ್ಜುನ ಸ್ವಾಮೀಜಿಗೆ ಗುರುವಂದನೆ ಸಲ್ಲಿಸುತ್ತಿರುವ ನಾಗನೂರು ರುದ್ರಾ ಮಠದ ಕಾರ್ಯ ಶ್ಲಾನೀಯ ಎಂದರು.
ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಗುರು ಅರಿವಿನ ಆತ್ಮಜ್ಯೋತಿ, ಪ್ರೇಮದ ಪರಮ ಮೂರ್ತಿ ಇದ್ದಂತೆ. ನಮಗೆಲ್ಲ ಅರಿವು, ಒಲವು, ಬಾಳು, ಬದುಕನ್ನು ನೀಡಿ ನಮ್ಮ ನೋವು ನಲಿವುಗಳಲ್ಲಿ, ಸೋಲು& ಗೆಲುವುಗಳಲ್ಲಿ ಭಾಗಿಯಾಗುವ ಗುರು ಸದಾ ಪೂಜ್ಯನಿಯ ಎಂದರು. ಕರ್ನಾಟಕ ಜರ್ಮನ್ ತರಬೇತಿ ಕೇಂದ್ರದ ಮೂಲಕ ನಾಡಿನ ಬಡ ಮಕ್ಕಳಿಗೆ ಕೈಗಾರಿಕಾ ತರಬೇತಿ ನೀಡುತ್ತಿರುವ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಚಿದಾನಂದ ಬಾಕಿ ಅವರನ್ನು ಸನ್ಮಾನಿಸಲಾಯಿತು.
ನಾಗನೂರು ರುದ್ರಾ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಮಲ್ಲನಕೆರೆ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ, ಚಂದ್ರಗಿರಿ ಮಹಿಳಾ ಶಿಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಎಲ್. ಪಾಟೀಲ, ವಿಾನ ಕೇಂದ್ರದ ರಾಜಶೇಖರ ಪಾಟೀಲ ಇತರರಿದ್ದರು.