

ಗುಳೇದಗುಡ್ಡ: ಹಿಂದು ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮದಲ್ಲಿ ಗುರು ಪೂರ್ಣಿಮೆಗೆ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಪವಿತ್ರ ದಿನವು ಆಧ್ಯಾತ್ಮಿಕ ಮಾರ್ಗದರ್ಶನದ ಪ್ರಾಮುಖ್ಯತೆಯನ್ನು ಅಂಗೀಕರಿಸುತ್ತದೆ. ತಮ್ಮ ಶಿಷ್ಯರ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಗುರುಗಳಿಗೆ ಕತಜ್ಞತೆ ಮತ್ತು ಗೌರವವನ್ನು ಸಲ್ಲಿಸುವುದು ಈ ಹಬ್ಬದ ವಿಶೇಷ ಎಂದು ಮೇಘರಾಜಪ್ಪ ಮುಳಗುಂದ ಹೇಳಿದರು.
ಇತ್ತೀಚೆಗೆ ಗುರು ಪೂರ್ಣಿಮೆ ನಿಮಿತ್ತ ಶ್ರೀ ಸದ್ಗುರು ಪರಪ್ಪ ಸ್ವಾಮಿಗಳ ವಂಶಸ್ಥರಾದ ಪಟ್ಟಣದ ಪ್ರಕಾಶ ಹಾನಾಪೂರ ಅವರ ಮನೆಯಲ್ಲಿ ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಗುರು ಎಂಬ ಪದವು ಇಂಗ್ಲಿಷ್ ನಿಘಂಟಿನ ಭಾಗವಾಗಿದೆ. ಆದರೆ ಗುರು ಎಂಬ ಪದದ ಮೂಲ ಸಂಸ್ಕೃತವಾಗಿದೆ. ‘ಗು’ ಅಂದರೆ ಕತ್ತಲೆ ಮತ್ತು ‘ರು’ ಅಂದರೆ ಕತ್ತಲೆ ತೆಗೆಯುವುದು ಎಂದು. ಗುರು ಎಂದರೆ ನಮ್ಮ ಜೀವನದಿಂದ ಅನಕ್ಷರತೆ ಮತ್ತು ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವರು ಎಂದರು.
ಮುರಳೀಧರ ಹಾನಾಪೂರ, ಪ್ರಕಾಶ ಹಾನಾಪೂರ, ರಮೇಶ ಮುಳಗುಂದ, ರತ್ನಾಬಾಯಿ ಶಿರಸಾಲ, ಸುರೇಶ ಹಾನಾಪೂರ, ನಾಗೇಶ ಹಾನಾಪೂರ, ಆನಂದ ಹಾನಾಪೂರ, ಗಣೇಶ ಹಾನಾಪೂರ, ರಮೇಶ ಹಾನಾಪೂರ, ಪುಂಡಲೀಕಪ್ಪ ಹಾನಾಪೂರ, ಮಂಜುನಾಥ ಹಾನಾಪೂರ, ವಿಜಯಾನಂದ ಹಾನಾಪೂರ, ಮುರಳೀಧರ ಹಾನಾಪೂರ, ಗುರುನಾಥಪ್ಪ ಮುಳಗುಂದ, ಗಣೇಶ ಮುಳಗುಂದ, ಪಾಂಡುರಂಗ ಮುಳಗುಂದ ಬಂಧುಗಳು ಪಾಲ್ಗೊಂಡಿದ್ದರು. ಶ್ರೀ ಬನಶಂಕರಿ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಪದಗಳ ಕಾರ್ಯಕ್ರಮಮ ನಡೆಯಿತು.