

ವಿಜಯವಾಣಿ ಸುದ್ದಿಜಾಲ ಕಟೀಲು
ಕಟೀಲು ದೇವಳಕ್ಕೆ ಬಾಲ್ಯದಿಂದಲೂ ಬರುತ್ತಿದ್ದು, ಇಂದಿನ ಈ ಕಾರ್ಯಕ್ರಮದ ಆಗಮನವೇ ನನಗೆ ಸಿಕ್ಕಿದ ಅತ್ಯಂತ ದೊಡ್ದ ಅವಾರ್ಡ್. ಜೀವನದ ಗುರಿ ತಲುಪಬೇಕಾದರೆ ಗುರು ಬೇಕು. ನಿಮ್ಮ ಗುರಿ ತಲುಪಿ, ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮತನ ಮರೆಯಬಾರದು ಎಂದು ನಿರೂಪಕಿ ಅನುಶ್ರೀ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸಮೂಹ ವಿದ್ಯಾ ಸಂಸ್ಥೆಗಳ ಸಂಯೋಜನೆಯಲ್ಲಿ 4ನೇ ವರ್ಷದ ಭ್ರಮ ಇಂಚರ ನುಡಿಹಬ್ಬ ಕಾರ್ಯಕ್ರಮದ ನುಡಿತೋರಣ ಸಾಧನೆಗಳೆಡೆಗೆ ಸಾಗುವ ಬಗೆಯಲ್ಲಿ ಮಾತನಾಡಿದರು.
ಹಲವು ವಿದ್ಯಾರ್ಥಿಗಳು ಅನುಶ್ರೀಗೆ ಉಡುಗೊರೆ ನೀಡಿದರು. ವಿದ್ಯಾರ್ಥಿಗಳೊಂದಿಗೆ ಹಾಡು ಹಾಡಿ ಸಂಭ್ರಮಿಸಿದರು. ತುಳುವಿನಲ್ಲೇ ಮಾತನಾಡಿದ ಅನುಶ್ರೀ ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಸೂರಜ್ ಶೆಟ್ಟಿ ಬಜ್ಪೆ, ಡಾ.ಅನಿತ್ ಕುಮಾರ್, ಅರ್ಪಿತಾ ಶೆಟ್ಟಿ ಅತ್ತೂರು ಉಪಸ್ಥಿತರಿದ್ದರು. ಕಾರ್ಯಕ್ರಮ ಮುಗಿದು ವಾಪಸಾಗುವಾಗ ವಿದ್ಯಾರ್ಥಿಗಳು ಸೆಲ್ಫಿಗಾಗಿ ಮುಗಿಬಿದ್ದರು.