ಶಾಸ್ತ್ರ ಬದ್ಧ ಸಂಗೀತಕ್ಕೆ ಗುರು ಮುಖ್ಯ

28 vikram 7
????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಗುರುಪೂರ್ಣಿಮೆ ಅಂಗವಾಗಿ ಶಿಷ್ಯರು ಗುರುಗಳ ಆಶೀರ್ವಾದ ಪಡೆಯುವ ಮೂಲಕ ಗುರುಸ್ಮರಣೆಯಲ್ಲಿ ತೊಡಗಿಕೊಳ್ಳುವುದೇ ನಿಜವಾದ ಗುರುವಂದನೆಯಾಗಿದೆ. ಇದನ್ನು ವ್ಯಾಸ ಪೂರ್ಣಿಮೆ ಎಂದು ಕರೆಯುತ್ತೇವೆ ಎಂದು ಸಾಹಿತಿ ಡಾ.ಹ.ವೆಂ.ಕಾಖಂಡಕಿ ಅಭಿಪ್ರಾಯಪಟ್ಟರು.
ನಗರದ ಬೇಂದ್ರೆ ಭವನದಲ್ಲಿ ಶ್ರೀಗುರು ಹಿಂದೂಸ್ತಾನಿ ಸಂಗೀತ ವಿದ್ಯಾಲಯ ಭಾನುವಾರ ಏರ್ಪಡಿಸಿದ್ದ ಗುರುವಂದನಾ ಹಾಗೂ ಸಂಗೀತೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ಉಪ ಶಾಸ್ತ್ರೀಯ ಸಂಗೀತವನ್ನು ಗುರುಮುಖೇನ ಕಲಿತಾಗ ಮಾತ್ರ ಸ್ವರಬದ್ಧ, ಶಾಸ್ತ್ರ, ತಾಳ ಬದ್ಧವಾಗಿ ಹಾಡಲು ಸಾಧ್ಯವಾಗುತ್ತದೆ ಎಂದರು.
ನಂತರದಲ್ಲಿ ನಡೆದ ಸಂಗೀತೋತ್ಸವದಲ್ಲಿ ರಶ್ಮಿ ಕಾಖಂಡಕಿಯವರು ರಾಗ ಕೇದಾರ ಹಾಗೂ ದಾಸವಾಣಿ ಪ್ರಸ್ತುತ ಪಡಿಸಿದರು. ಗಾಯಕ ಬಸವರಾಜ ವಂದಲಿಯವರು ರಾಗ ಪೂರಿಯಾ ಕಲ್ಯಾಣ ಮತ್ತು ಮಹಿಪತಿದಾಸರ ಕೀರ್ತನೆ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಜಯತೀರ್ಥ ಪಂಚಮುಖಿ, ಅಯ ಜೋಶಿ ಹಾಗೂ ಹಾರ್ಮೋನಿಯಂದಲ್ಲಿ ವಿನೋದ ಪಾಟೀಲ ಸಾಥ್​ ನೀಡಿದರು.
ಸಮೀರ ಜೋಶಿ, ಪ್ರಕಾಶ ಬಾಳಿಕಾಯಿ, ಪುನರ್ವಸು ಬೇಂದ್ರೆ, ರಶ್ಮಿ ಕಾಖಂಡಕಿ, ವೆಂಕಟೇಶ ಕಾಖಂಡಕಿ, ಇತರರು ಇದ್ದರು. ರಮೇಶ ಕಾಖಂಡಕಿ ಸ್ವಾಗತಿಸಿದರು. ಕಾವ್ಯಾ ಕುರ್ತಕೋಟಿ ನಿರೂಪಿಸಿದರು. ತಾರಾ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net