ಗುರು ಇದ್ದರೆ ಗುರಿ ಸಾಧಿಸಲು ಸಾಧ್ಯ

4.ktal.01
ಕವಿತಾಳ ಸಮೀಪದ ಸೈದಾಪೂರ ಶಾಲೆಯ ವಜ್ರಮಹೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಶಾಸಕ ಹಂಪಯ್ಯ ನಾಯಕ ಉದ್ಘಾಟಿಸಿದರು. ಅಯ್ಯಣ್ಣ ತಾತ, ಗುರುಬಸಯ್ಯ ಹಿರೆಮಠ, ಮಾಜಿ ಶಾಸಕರಾದ ಗಂಗಾಧರ ನಾಯಕ, ಬಸನಗೌಡ ಬ್ಯಾಗವಾಟ. ಎಸ್ಡಿಎಂಸಿ ಅಧ್ಯಕ್ಷ ಮಲ್ಲಪ್ಪ ಇದ್ದರು.
Published on

ಕವಿತಾಳ: ಉತ್ತಮ ಶಿಕ್ಷಕರು ಸಮಾಜಕ್ಕೆ ಮಾದರಿಯಾಗಿದ್ದು, ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಂಡರೆ ಉನ್ನತ ಸಾಧನೆ ಸಾಧ್ಯ ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.

ಸೈದಾಪೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಜ್ರ ಮಹೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಗುರುಗಳ ಮಾರ್ಗದರ್ಶನದಲ್ಲಿ ಕಲಿತು ಉನ್ನತ ಹುದ್ದೆಯನ್ನು ವಿದ್ಯಾರ್ಥಿಗಳು ಅಲಂಕರಿಸಿರುವುದು ಸಂತಸದ ಸಂಗತಿ. ಬದುಕಲ್ಲಿ ಗುರಿ-ಗುರು ಇರಲಿ ಎಂದು ತಿಳಿಸಿದರು.

ಶಿಕ್ಷಕರಾದ ಪಂಪನಗೌಡ ಮಾ.ಪಾ., ಮೌಲಾಲಿ ದಸ್ತಗೀರ, ಬಸಪ್ಪ ಹಳ್ಳೂರು, ಶಿವರಾಜ, ಶಿವನಂದಾ ಸಾವಳಗಿ, ಹಸನ್ ಮೋಹಿನುದ್ದೀನ್, ಲಾಲಸಾಬ್, ನಂದಪ್ಪ, ವಿಜಯಕುಮಾರ, ಅನಂತರಾಜ್ ಕರಡಿ, ಅನಿತಾ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ದೇವಮ್ಮ, ಪಿಡಿಒ ಪ್ರಸಾದ, ಮುಖ್ಯ ಶಿಕ್ಷಕ ಅನಂತರಾಜ್, ಪ್ರಮುಖರಾದ ಬಸವರಾಜ, ರಾಮಣ್ಣ, ಬಸಯ್ಯ ಕರಡಗಿ, ಚಂದ್ರಮಪ್ಪ ದೊರೆ, ಚಿನ್ನಪ್ಪ, ಚಿದಾನಂದಪ್ಪ, ಶಾಂತ, ರಮೇಶ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net