ಗುರು ಶಿಷ್ಯರ ಸಂಬಂಧಕ್ಕೆ ಬೆಲೆ ಕಟ್ಟಲಾಗದು

ಅರಸೀಕೆರೆ ನಗರದ ಶಾಂತಿನಿಕೇತನ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಪರಮೇಶ್, ಗುರುಸಿದ್ದೇಶ್, ಮೌಲಾನಾ ಸೈಯದ್ ಅಬ್ದುಲ್ ಖಾದರ್ ನೂರಾನಿ, ಸುರೇಖಾ, ನವೀನ್ ಕುಮಾರ್, ನಿಲೇಶ್, ಅಸಾದುಲ್ಲಾ ಇತರರಿದ್ದರು.
ಅರಸೀಕೆರೆ ನಗರದ ಶಾಂತಿನಿಕೇತನ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಪರಮೇಶ್, ಗುರುಸಿದ್ದೇಶ್, ಮೌಲಾನಾ ಸೈಯದ್ ಅಬ್ದುಲ್ ಖಾದರ್ ನೂರಾನಿ, ಸುರೇಖಾ, ನವೀನ್ ಕುಮಾರ್, ನಿಲೇಶ್, ಅಸಾದುಲ್ಲಾ ಇತರರಿದ್ದರು.
Published on

ಅರಸೀಕೆರೆ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಗುರುತರ ಹೊಣೆಗಾರಿಕೆ ಶಿಕ್ಷಕರು ಹಾಗೂ ಪಾಲಕರ ಮೇಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಪರಮೇಶ್ ಹೇಳಿದರು.

ನಗರದ ಶಾಂತಿನಿಕೇತನ ಪಬ್ಲಿಕ್ ಶಾಲೆ ವತಿಯಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಾಚೀನ ಶಿಕ್ಷಣ ವ್ಯವಸ್ಥೆಯಲ್ಲಿ ಗುರು ಮತ್ತು ಶಿಷ್ಯರ ನಡವಿನ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುವ ವಾತಾವರಣವಿತ್ತು. ್ತ. ಬದಲಾದ ವಿದ್ಯಮಾನದಲ್ಲಿ ಗುರುವೇ ಶಿಷ್ಯರಿಗೆ ನಮಸ್ಕರಿಸಿ ಪಾಠ ಹೇಳಬೇಕಿದೆ. ಶಿಕ್ಷಕರು ಶಾಲೆಯಲ್ಲಿ ಪಾಠ ಪ್ರವಚನ ಬೋಧಿಸುವ ಜತೆಗೆ ನೈತಿಕ ಮೌಲ್ಯಗಳನ್ನು ಪರಿಚಯಿಸಬೇಕು. ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲು ಗುರು ಎನ್ನುವ ಕವಿವಾಣಿಯಂತೆ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ, ನಡೆ, ನುಡಿ, ಕಿರಿಯರಿಗೆ ಗೌರವ ನೀಡುವ ಗುಣಗಳನ್ನು ಬೆಳೆಸಲು ಪ್ರೋತ್ಸಾಹ ನೀಡಿದಲ್ಲಿ ಸಮಾಜಕ್ಕೆ ಸತ್ಪ್ರಜೆಗಳನ್ನು ಕೊಡುಗೆ ನೀಡಿದ ಕೀರ್ತಿ ಲಭಿಸಲಿದೆ. ಈ ನಿಟ್ಟಿನಲ್ಲಿ ಪಾಲಕರು ಹಾಗೂ ಶಿಕ್ಷಕರು ಸದಾ ಕ್ರಿಯಾಶೀಲರಾಗಬೇಕು ಎಂದು ಸಲಹೆ ನೀಡಿದರು.

ಮಾಡಾಳು ಶಿವಬಸವ ಕುಮಾರಾಶ್ರಮದ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ, ಮೂರು ವರ್ಷದ ಕಲಿಕೆ ನೂರು ವರ್ಷದ ಜೀವನದ ಪ್ರಗತಿಗೆ ಪ್ರತಿ ಹಂತದಲ್ಲೂ ಉಪಯೋಗಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ಶಾಂತಿನಿಕೇತನ ಪಬ್ಲಿಕ್ ಶಾಲೆ ಕೆಲಸ ಮಾಡುತ್ತಿದೆ. ಶಿಕ್ಷಕರು ತರಗತಿಯಲ್ಲಿ ಬೋಧಿಸುವ ಪಾಠ ಪ್ರವಚನ ಕಲಿತು ಬದುಕು ರೂಪಿಸಿಕೊಳ್ಳಿ. ಸ್ಪರ್ಧಾತ್ಮಕ ಜಗತ್ತಿನ ವೇಗಕ್ಕೆ ತೆರೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಶಾಲೆಯ ಚೇರ್ಮನ್ ಎ.ಬಿ.ಗುರುಸಿದ್ದೇಶ್, ಬಿಲಾಲ್ ಮಸೀದಿಯ ಧರ್ಮಗುರು ಮೌಲಾನಾ ಸೈಯದ್ ಅಬ್ದುಲ್ ಖಾದರ್ ನೂರಾನಿ, ಆಡಳಿತಾಧಿಕಾರಿ ಸುರೇಖಾ, ವಕೀಲ ನಿಲೇಶ್, ಓಂಕಾರಮೂರ್ತಿ, ಮೋಹನ್ ಕುಮಾರ್, ಗೌಸ್ ಮೊಹಿದ್ದೀನ್ ಷರೀಫ್,ನಾಗರಾಜ್ ನಾಯ್ಕ ಇತರರಿದ್ದರು. ನಿವೃತ್ತ ಸೈನಿಕರಾದ ನವೀನ್ ಕುಮಾರ್, ಅಸಾದುಲ್ಲಾ, ಪ್ರಗತಿಪರ ರೈತ ವಸಂತ್ ಕುಮಾರ್ ಸೇವೆ ಪರಿಗಣಿಸಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net