ಮೆಣಸಗಿಯಲ್ಲಿ ಗುರು-ಶಿಷ್ಯರ ಸಮಾಗಮ

GURUVANDANE
Published on

ಮೆಣಸಗಿ: ಗ್ರಾಮದ ಶ್ರೀ ಶರಣಬಸವೇಶ್ವರ ಪ್ರೌಢಶಾಲೆಯ 1993-94ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಗುರುವಂದೆನ ಕಾರ್ಯಕ್ರಮ ಜರುಗಿತು.
ಸಾನ್ನಿಧ್ಯ ವಹಿಸಿದ್ದ ಅವರಾದಿ ಫಲಹಾರೇಶ್ವರ ಸಂಸ್ಥಾನ ಮಠದ ಮನಿಪ್ರ ಶಿವಮೂರ್ತಿ ಶ್ರೀಗಳು ಮಾತನಾಡಿ, ಬದುಕಿನಲ್ಲಿ ಯಾವುದೇ ಸಾಧನೆಯ ಹಿಂದೆ ಗುರುಗಳ ಮಾರ್ಗದರ್ಶನ ಅಗತ್ಯ. ಅದರಲ್ಲೂ ಬದುಕಿನ ಆರಂಭದ ಮೆಟ್ಟಿಲುಗಳನ್ನು ಕಲಿಸುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಮರೆಯಲು ಅಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಲಿಂಗಬಸವೇಶ್ವರ ಸಂಸ್ಥಾನ ಮಠದ ವೇ.ಮೂ. ಮುದಿಯಪ್ಪಯ್ಯನವರು ಮಾತನಾಡಿ, ಗುರು ಎಂದರೆ ಅರಿವಿನ ಅಭಿವೃದ್ಧಿಯ ಒಂದು ಮೂಲತತ್ವವಾಗಿದೆ. ಇದು ಅಜ್ಞಾನ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯೂತ್ತದೆ ಎಂದರು.

ಹಳೆಯ ವಿದ್ಯಾರ್ಥಿ ರವೀಂದ್ರ ಹಿರೇಮಠ ಮಾತನಾಡಿ, 30 ವರ್ಷಗಳ ನಂತರ ಗುರು-ಶಿಷ್ಯರು ಸೇರಿ ಹಳೆಯ ದಿನಗಳನ್ನು ಮೆಲುಕು ಹಾಕಿದೆವು. ಶಾಲೆಯ ಕುರಿತು ವಿಡಿಯೋ ವೀಕ್ಷಿಸಿ ಪುಳಕಿತರಾದೆವು. ಭವಿಷ್ಯಕ್ಕೆ ಅಡಿಪಾಯ ಹಾಕಿದ ಶಿಕ್ಷಕರ ಕಾರ್ಯವನ್ನು ಭಕ್ತಿ ಪೂರ್ವಕವಾಗಿ ಸ್ಮರಿಸಿದೆವು ಎಂದರು.
ಎಂ.ಬಿ. ಸೋಮನಕಟ್ಟಿ ಮಾತನಾಡಿ, ಸಾವಿರಾರು ಸೂರ್ಯ-ಚಂದ್ರ ಹುಟ್ಟಿ ಬಂದರೂ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ. ಆದರೆ, ಗುರುವಿನ ಅನುಗ್ರಹದಿಂದ ಮಾತ್ರ ತೊಡೆದು ಹಾಕಲ್ಪಡುತ್ತದೆ ಎಂದರು.

ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಶಿಕ್ಷಕರನು ಸನ್ಮಾನಿಸಲಾಯಿತು. ಮುಖ್ಯೋಪಾಧ್ಯಾಯ ಬಿ. ಆರ್. ರಾಠೋಡ, ಎಫ್.ಸಿ. ಎಲಿಗಾರ, ಆರ್.ವಿ. ಉಳ್ಳಾಗಡ್ಡಿ, ಎಸ್.ಆರ್. ಭಿಕ್ಷಾವತಿಮಠ, ಬಿ.ಎಂ. ಹೂಗಾರ, ಜಿ.ವೈ. ಜೋಶಿ, ವಿ.ಬಿ. ಬಾಣದ, ಎಸ್.ಎಸ್. ಬಾಣದ, ಪ್ರೊ. ಸುಬ್ರಯ್ಯಪ್ಪ ಹವಾಲ್ದಾರ, ಪ್ರವೀಣ ಕುಲಕರ್ಣಿ, ಎ.ಎಸ್. ಕುರಹಟ್ಟಿ, ಎಸ್.ಎಂ. ತಿಪ್ಪಣ್ಣವರ, ಎ.ಪಿ. ಬಾಣದ, ಬಿ.ಕೆ. ಮಾದರ, ವಿ.ಬಿ. ಹಿರೇಗೌಡರ, ಶಿಕ್ಷಕರಾದ ಶೇಖರಗೌಡ ಕ್ಯಾಮನಗೌಡ್ರ, ಪ್ರೊ. ಬಸವರಾಜ ಚವಡಿ, ವೆಂಕನಗೌಡ ಹಿರೇಗೌಡ್ರ, ಅಂದಪ್ಪ ತೋಟದ, ಅಡಿವಪ್ಪ ಕಟ್ಟೆನ್ನವರ, ದಸ್ತಗೀರ ನದಾಫ್, ವೆಂಕನಗೌಡ ಗೋಲಗೌಡ್ರ, ನಿಂಗನಗೌಡ ಹಿರೇಗೌಡ್ರ, ನಿಂಗಬಸಪ್ಪ ಪಟ್ಟಣಶೆಟ್ಟಿ, ನಿಂಗಬಸಪ್ಪ ಗುಡಿಮನಿ, ಸುರೇಶ ಜೋಗ, ಜಗದೀಶ ಮಡಿವಾಳರ, ಜಗದೀಶ ಬಡಿಗೇರ, ಮುತ್ತಪ್ಪ ಹಡಪದ, ರಮೇಶ ಹಡಪದ, ಹನುಮಂತ ಹೂಗಾರ, ಮುತ್ತಪ್ಪ ಬಾಣದ, ರಮಜಾನ ಸಂಕನೂರ, ಮುತ್ತಪ್ಪ ಗುರಮ್ಮನವರ, ಮಲ್ಲಪ್ಪ ಬಂಗಿಗೌಡರ, ಹುಚ್ಚಪ್ಪ ಚಲವಾದಿ, ಮಹಾದೇವಪ್ಪ ಮಾದರ, ಮಹೇಶ ಬೆಳವಣಿಕಿ, ಶಿವಲಿಂಗಪ್ಪ ಅರಹುಣಸಿ, ಸುರೇಶ ಪಾಟೀಲ, ಮಲ್ಲಪ್ಪ ಅರಹುಣಸಿ, ಮೈಲಾರಪ್ಪ ಚಿಕ್ಕನರಗುಂದ, ವಿದ್ಯಾರ್ಥಿನಿಯರಾದ ಲಲಿತಾ ಪಾಟೀಲ, ಬಸವ್ವ ಗುರಮ್ಮನವರ, ಪ್ರೇಮಾ ಹಿರೇಗೌಡ್ರು, ಚೆನ್ನವ್ವ ಚಲವಾದಿ, ಸುಧಾ ಬಡಿಗೇರ, ಕಲಾವತಿ ಅಂಗಡಿ, ರೇಣುಕಾ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net