

ಮಾಲೂರು: ಗುರುಭವನ ಕಟ್ಟಡವನ್ನು 5 ಕೋಟಿ ರೂ.ಗಳ ವೆಚ್ಚದಲ್ಲಿ ನಿಮಾರ್ಣ ಮಾಡಲಾಗುತ್ತಿದ್ದು, ಮುಂದಿನ ನಾಲ್ಕು ತಿಂಗಳ ಒಳಗಡೆ ಕಾಮಗಾರಿ ಮುಗಿಸಿ ಗುರುಭವನ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಪಟ್ಟಣದ ಮಾರುತಿ ಬಡಾವಣೆಯಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ನಿಮಾರ್ಣವಾಗುತ್ತಿರುವ ಗುರುಭವನ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಈಗಾಗಲೇ ಗುರುಭವನ ಕಟ್ಟಡಕ್ಕೆ ಜಾತ್ಯತಿತವಾಗಿ ಪಕ್ಷತವಾಗಿ ಹಲವು ಸಂಘ&ಸಂಸ್ಥೆಗಳು ಗ್ರಾಮ ಪಂಚಾಯಿತಿಗಳು, ತಾಲೂಕು ಪಂಚಾಯಿತಿ, ಪುರಸಭೆ ಸಂಘ&ಸಂಸ್ಥೆಗಳು ಹಾಗೂ ದಾನಿಗಳು ಸಹಕಾರ ನೀಡಿದ್ದಾರೆ. ಇನ್ನು ಹೊಸ ದಾನಿಗಳನ್ನು ಭೇಟಿ ಮಾಡಿ ನಿಧಿಯನ್ನು ಗುರುಭವನಕ್ಕೆ ಸಂಗ್ರಹಿಸಬೇಕೆಂದು ಗುರುಭವನ ಕಟ್ಟಡ ಸಮಿತಿಯ ಪದಾಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಾಧಿಕಾರಿ ಪ್ರದಿಪ್ಕುಮಾರ್, ಪುರಸಭಾ ಸದಸ್ಯ ಬುಲೆಟ್ ವೆಂಕಟೇಶ್, ಸರ್ಕಲ್ ಇನ್ಸ್ಪೆಕ್ಟರ್ ವಸಂತ್, ಕಾರ್ಯ ಪಾಲಕ ಅಭಿಯಂತರರಾದ ವಿಶ್ವನಾಥ್ ರೆಡ್ಡಿ, ಬಿಇಒ ಚಂದ್ರಕಲಾ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿ ಡಾ. ವಸಂತ್ ಇದ್ದರು.