

ಗುರುಪುರ: ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ಗುರು ರಾಮಾಂಜನೇಯ ದೇವರ ಸನ್ನಿಧಿಯಲ್ಲಿ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಮುಂದಾಳತ್ವ, ಅರುಣ್ ಭಟ್ರವರ ಅಧ್ವರ್ಯತನ, ಪ್ರಜ್ವಲ್ ಭಟ್ ಬಿಜೈ ಯಾಜಕತ್ವದಲ್ಲಿ ಜ.3, 4, 5ರಂದು ವಾರ್ಷಿಕ ವಜ್ರದೇಹಿ ಜಾತ್ರೆ ನಡೆಯಲಿದೆ.
3ರಂದು ಬೆಳಗ್ಗೆ 6ರಿಂದ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ವಿಶೇಷ ಸಾನಿಧ್ಯ ಹೊಂದಿರುವ ಕೂರ್ಮ ಮಹಾಸಾಲಿಗ್ರಾಮ, ಅನಂತ ಪದ್ಮನಾಭ ಮಹಾಸಾಲಿಗ್ರಾಮಕ್ಕೆ ಮಹಾಮಜ್ಜನ, ನವಕ ಕಲಶಾಭಿಷೇಕ ನಡೆಯಲಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ಹರಿನಾಮ ಸಂಕೀರ್ತನೆ, 12.30ಕ್ಕೆ ಸರ್ವಾಲಂಕೃತ ಮಹಾಪೂಜೆ, ಅನ್ನಸಂತರ್ಪಣೆ, 2ರಿಂದ ಸಂಜೆ 4ರವರೆಗೆ ಹರಿನಾಮ ಸಂಕೀರ್ತನೆ, 5ಕ್ಕೆ ರಂಗಪೂಜೆ, ಶ್ರೀ ದೇವರ ಬಲಿ ಉತ್ಸವ, ಕಟ್ಟೆಪೂಜೆ, ಕವಾಟ ಬಂಧನ, ರಾತ್ರಿ 8ರಿಂದ ನೃತ್ಯ ವೈವಿಧ್ಯ ‘ಸನಾತನ ರಾಷ್ಟ್ರಾಂಜಲಿ’ ನಡೆಯಲಿದೆ.
4ರಂದು ಬೆಳಗ್ಗೆ 6ಕ್ಕೆ ಕವಾಟೋದ್ಘಾಟನೆ, ಹರಿನಾಮ ಸಂಕೀರ್ತನೆ, ಶ್ರೀ ನಾಗದೇವರಿಗೆ ಪಂಚಾಮೃತಾಭಿಷೇಕ, ಪವಮಾನಾಭಿಷೇಕ, ಸಾಮೂಹಿಕ ಆಶ್ಲೇಷ ಬಲಿ ಪೂಜೆ, 11.30ರಿಂದ ಸರ್ವಾಲಂಕಾರ ಪೂಜೆ, ದೇವರ ಬಲಿ, ಪಲ್ಲಪೂಜೆ, ಅನ್ನಸಂತರ್ಪಣೆ ಜರುಗಲಿದೆ. 2ರಿಂದ ಗೀತೆ-ನೃತ್ಯದ ವಿನೂತನ ಕಾರ್ಯಕ್ರಮ, ಸಂಜೆ 5ರಿಂದ ದೇವರ ಬಲಿ, ಕಟ್ಟೆಪೂಜೆ, ಅಷ್ಟಾವಧಾನ ಸೇವೆ, ನೃತ್ಯ ಸೇವೆ, ಓಕುಳಿ, ಅವಭೃತ ನಡೆಯಲಿದೆ. ರಾತ್ರಿ 8ರಿಂದ ಒರಿಯಾಂಡಲಾ ಸರಿ ಬೋಡು ತುಳು ನಾಟಕ ಪ್ರದರ್ಶನಗೊಳ್ಳಲಿದೆ.
5ರಂದು ಬೆಳಗ್ಗೆ ಧರ್ಮ ದೈವಗಳ ಸನ್ನಿಧಿಯಲ್ಲಿ ನವಕ ಕಲಶ ಪ್ರಧಾನ ಹವನ, ಪಂಚಪರ್ವ, 9 ಗಂಟೆಗೆ ಧರ್ಮ ದೈವಗಳ ಭಂಡಾರ ಏರಲಿದೆ. 10ರಿಂದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಹಿಂದು ದರ್ಶನ-ಸಂಭವಾಮಿ ಯುಗೇ ಯುಗೇ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಹಾರಿಕಾ ಮಂಜುನಾಥ ಉಪನ್ಯಾಸ ನೀಡುವರು. ಉಡುಪಿಯ ಅದಮಾರು ಮಠದ ಕಿರಿಯ ಶ್ರೀಗಳಾದ ಈಶಪ್ರಿಯ ತೀರ್ಥ ಸ್ವಾಮೀಜಿ ಅವರಿಂದ ಅನುಗ್ರಹ ಸಂದೇಶ, ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಮಧ್ಯಾಹ್ನ 12.30ರಿಂದ ಧರ್ಮ ಸಭೆ ನಡೆಯಲಿದೆ. ಡಾ.ಕೆ.ಪ್ರಕಾಶ್ ಶೆಟ್ಟಿ ಅವರಿಗೆ ಗೌರವ ಸನ್ಮಾನ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ಜರುಗಲಿದೆ. ಮಧ್ಯಾಹ್ನ 2ರಿಂದ ಗೀತಾ ಸಾಹಿತ್ಯ ಸಂಭ್ರಮ ಜರುಗಲಿದೆ. ಸಂಜೆ 6ರಿಂದ ಧರ್ಮಮೂರ್ತಿ ಮೈಸಂದಾಯ ದೈವದ ನೇಮ, ರಾತ್ರಿ 9ರಿಂದ ಶ್ರೀ ರಕ್ತೇಶ್ವರಿ ದೈವ, ಅಣ್ಣಪ್ಪ ಧರ್ಮದೈವದ ನೇಮ ನಡೆಯಲಿದೆ ಎಂದು ವಜ್ರದೇಹಿ ಮಠದ ಪ್ರಕಟಣೆ ತಿಳಿಸಿದೆ.