

ಯಲ್ಲಾಪುರ: ಇಲ್ಲಿನ 14 ವರ್ಷದ ಬಾಲಕ ಅಬ್ದುಲ್ ಮತೀನ್ ಶೇಖ್ ಸಲೀಮ್ ಅವರು 72 ಇಂಗ್ಲಿಷ್ ಪದಗಳ ಸ್ಪೆಲ್ಲಿಂಗ್ ಹಿಂದುಮುಂದಾಗಿ ಉಚ್ಚರಿಸಿ ಇಂಡಿಯಾ ಬುಕ್ ಆಪ್ ರೆಕಾರ್ಡ್ಸ್ ಸೇರಿದ್ದಾರೆ.
ಪಟ್ಟಣದ ನಿವಾಸಿಯಾಗಿರುವ ಅಬ್ದುಲ್, ಪ್ರಸ್ತುತ ಬೆಂಗಳೂರು ಉತ್ತರ ಯಲಹಂಕದ ಪ್ರೆಸಿಡೆನ್ಸಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎಷ್ಟೇ ದೊಡ್ಡ ಇಂಗ್ಲಿಷ್ ಶಬ್ದಗಳ ಸ್ಪೆಲ್ಲಿಂಗನ್ನು ಕೇಳಿದರೂ ತಕ್ಷಣ ಹಿಂದುಮುಂದಾಗಿ ಹೇಳುವ ವಿಶೇಷ ಕೌಶಲ್ಯ ಹೊಂದಿರುವ ಅಬ್ದುಲ್ ಮತೀನ್, ಅದೇ ಕೌಶಲ್ಯದಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿ ಸಾಧನೆ ಮಾಡಿದ್ದಾರೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ಗೆ ತಯಾರಿ ನಡೆಸುತ್ತಿದ್ದಾರೆ.
ಭೌತಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಅವರು ಐಐಎಸ್ಇಆರ್ ಮತ್ತು ಎನ್ಐಎಸ್ಇಆರ್ ಅಧ್ಯಯನಕ್ಕೆ ಆಸಕ್ತಿ ಹೊಂದಿದ್ದಾರೆ.