ಡಿಸಿ ನಿಗದಿಪಡಿಸಿದ ದರ ಪಡೆಯಲಿ

Untitled design (22)
Published on

ಸಿಂಧನೂರು: ಒಂದು ಗಂಟೆ ಭತ್ತ ಕಟಾವಿಗೆ 2450 ರೂ. ಬಾಡಿಗೆ ನಿಗದಿಪಡಿಸಿ ಡಿಸಿ ಹೊರಡಿಸಿರುವ ಆದೇಶ ಕಟ್ಟುನಿಟ್ಟಾಗಿ ಜಾರಿ ಮಾಡಲು ಒತ್ತಾಯಿಸಿ ಗುಂಜಳ್ಳಿ ರೈತರು ಗುರುವಾರ ನಗರದಲ್ಲಿ ತಾಲೂಕು ಕಚೇರಿಯ ಉಪತಹಸೀಲ್ದಾರ್ ಚಂದ್ರಶೇಖರಗೆ ಮನವಿ ಸಲ್ಲಿಸಿದರು.

ಗುಂಜಳ್ಳಿ ಗ್ರಾಮದಲ್ಲಿ ಆದೇಶ ಧಿಕ್ಕರಿಸಿ ಒಂದು ಗಂಟೆ ಭತ್ತ ಕಟಾವಿಗೆ 3 ಸಾವಿರ ರೂ. ಬಾಡಿಗೆಯನ್ನು ಯಂತ್ರದ ಮಾಲೀಕರು ಪಡೆಯುತ್ತಿದ್ದಾರೆ. 2450 ರೂ. ಪಡೆಯುವಂತೆ ಹೇಳಿದರೂ ಕೇಳುತ್ತಿಲ್ಲ. ನಮಗೆ ಆಗುವುದಿಲ್ಲ, ನೀವು ಬೇರ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೆದರಿಸುತ್ತಿದ್ದಾರೆ. ಸಾಕಷ್ಟು ಹಣ ಖರ್ಚು ಮಾಡಿ ಭತ್ತದ ಬೆಳೆಯಲಾಗಿದೆ. ಕಟಾವು ಮಾಡಿಸಲು ಹೋದರೆ ಯಂತ್ರದ ಮಾಲೀಕರು ಹೆಚ್ಚು ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಭತ್ತಕ್ಕೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲ. ಈಗ ಭತ್ತ ಕಟಾವು ಯಂತ್ರದ ಮಾಲೀಕರು ಮಧ್ಯವರ್ತಿಗಳಿಂದ ತೊಂದರೆಯಾಗುತ್ತಿದೆ. ಆದ್ದರಿಂದ ಹೆಚ್ಚು ಹಣ ಪಡೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಆಗ್ರಹಿಸಿದರು. ರೈತರಾದ ದೇವರಾಜ, ತಿಮ್ಮನಗೌಡ, ಅಮರೇಶ ಹೊಕ್ರಾಣಿ, ರಾಜಾಸಾಬ, ಅಮರೇಶ ಸಜ್ಜನ್, ರಾಘವೇಂದ್ರ, ಶರಣಪ್ಪ, ಹನುಮಂತ, ಶಂಕರಗೌಡ, ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net