ಅಣ್ಣನನ್ನೇ ಕೊಲೆ ಮಾಡಿದ ತಮ್ಮ

Crime Logo
Published on

ಗುಂಡ್ಲುಪೇಟೆ: ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಸಲುವಾಗಿ ತಮ್ಮನೇ ಅಣ್ಣನನ್ನು ಶನಿವಾರ ಕೊಲೆ ಮಾಡಿದ್ದಾನೆ.

ಗ್ರಾಮದ ಪ್ರಸಾದ್(50) ಕೊಲೆಯಾದವರು. ಈತನ ಸಹೋದರ ಕುಮಾರ್ ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪಿ. ಪ್ರಸಾದ್ ತನ್ನ ಪತ್ನಿ ಕಲಾ, ಇಬ್ಬರು ಮಕ್ಕಳು, ತಾಯಿ ಮಣಿಯಮ್ಮ ಹಾಗೂ ಅವಿವಾಹಿತನಾಗಿದ್ದ ಸೋದರ ಕುಮಾರ್ ಜತೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಕುಮಾರ್ ತನ್ನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಳ್ಳಲು ಪೀಡಿಸುತ್ತಿದ್ದುದರಿಂದ ತಾವು ಒಂದೂವರೆ ವರ್ಷದ ಹಿಂದೆ ಬೇರೆಯಾಗಿದ್ದೆವು. ಶನಿವಾರ ರಾತ್ರಿ ಕುಮಾರ್ ತನ್ನ ಅಣ್ಣ ಪ್ರಸಾದ್ ಜತೆ ಜಗಳ ಆರಂಭಿಸಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಮೃತನ ಪತ್ನಿ ಕಲಾ ಪಟ್ಟಣ ಠಾಣೆಗೆ ನೀಡಿದ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net