ಜಾನಪದ ಪ್ರಪಂಚ ಪ್ರಶಸ್ತಿಗೆ ಗುಂಡು ಪೂಜಾರಿ ಆಯ್ಕೆ

gundu
ಗುಂಡು ಪೂಜಾರಿ
Published on

ಬೈಂದೂರು: ಕನ್ನಡ ಜಾನಪದ ಪರಿಷತ್ ಕೊಡಮಾಡುವ 2024ನೇ ಸಾಲಿನ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಶ್ರೀಗುರು ಮಾರುತಿ ಹೌಂದರಾಯನ ವಾಲ್ಗ ಜಾನಪದ ನೃತ್ಯ ತಂಡ ಹಿರಿಯ ಜಾನಪದ ಕಲಾವಿದ ಗುಂಡು ಪೂಜಾರಿ ಪಾರಂಪಳ್ಳಿ ಸಾಲಿಗ್ರಾಮ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ.ಎಸ್.ಬಾಲಾಜಿ ತಿಳಿಸಿದ್ದಾರೆ. ಅ.26ರಂದು ಬೆಂಗಳೂರು ಸೇಂಟ್ ಕ್ಲಾರೆಟ್ ಕಾಲೇಜು ಸ್ವಾಯತ್ತ ಜಾಲಹಳ್ಳಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net