ರಾಮೇಶ್ವರ ದೇವರಿಗೆ ಹರಿದ್ರಾ ಅಲಂಕಾರ

14-JAN-GPT-2
Published on

ಗುಂಡ್ಲುಪೇಟೆ: ಮಕರ ಸಂಕ್ರಾಂತಿಯ ಅಂಗವಾಗಿ ಮಂಗಳವಾರ ಪಟ್ಟಣದ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಸಮರ್ಪಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ನೇತೃತ್ವದಲ್ಲಿ ಶಿವಲಿಂಗಕ್ಕೆ 65 ಕೆ.ಜಿ. ಅರಿಶಿನ ಪುಡಿಯಿಂದ ಮಾಡಿದ್ದ ಹರಿದ್ರಾ ಅಲಂಕಾರ ಗಮನ ಸೆಳೆಯಿತು. ವೇದಘೋಷಗಳು ಹಾಗೂ ಮಂಗಳ ವಾದ್ಯಗಳೊಂದಿಗೆ ಸ್ವಾಮಿಗೆ ಮಹಾ ಮಂಗಳಾರತಿ ಮಾಡಲಾಯಿತು. ನಂತರ ನೂರಾರು ಭಕ್ತರಿಗೆ ಎಳ್ಳು- ಬೆಲ್ಲ ವಿತರಣೆ ಮಾಡಲಾಯಿತು. ಪಟ್ಟಣದ ಮಹಿಳೆಯರು ಪರಸ್ಪರ ಎಳ್ಳುಬೆಲ್ಲ ವಿತರಿಸಿ,ಶುಭಾಷಯ ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net