ನಾಳೆ ಕಣ್ಣಿನ ಉಚಿತ ತಪಾಸಣಾ ಶಿಬಿರ

Published on

ಗುಂಡ್ಲುಪೇಟೆ: ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ, ಅರಣ್ಯ ಇಲಾಖೆ, ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಅನುಗ್ರಹ ಫೌಂಡೇಷನ್ ಹಾಗೂ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲೂಕು ಘಟಕದ ಸಹಯೋಗದೊಂದಿಗೆ ಜೂ.27ರಂದು ಬಂಡೀಪುರದ ಹಳೇ ಸಫಾರಿ ಕೇಂದ್ರದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆವರೆಗೆ ಆಯೋಜಿಸಿರುವ ಶಿಬಿದಲ್ಲಿ ಕಣ್ಣಿನ ಪೊರೆ, ಹತ್ತಿರ ಮತ್ತು ದೂರದೃಷ್ಟಿ ದೋಷ, ಗ್ಲಾಕೋಮ, ಕಣ್ಣಿನಲ್ಲಿ ಬಿರುಕು ಉಂಟಾಗುವುದು, ಕಣ್ಣಿನಲ್ಲಿ ನೀರು/ಗೀಜು ಸೋರುವಿಕೆ, ವಾರೆ ಕಣ್ಣು, ರಾತ್ರಿ ಕುರುಡುತನ ಮುಂತಾದ ಕಣ್ಣಿನ ಸಮಸ್ಯೆಗಳನ್ನು ಪರೀಕ್ಷಿಸಲಾಗುವುದು. ಪೊರೆಯಿರುವ ಹಾಗೂ ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಅದೇ ದಿನ ಮಧ್ಯಾಹ್ನ ಕೊಯಮತ್ತೂರಿನ ಅರವಿಂದ ಕಣ್ಣಾಸ್ಪತ್ರೆಗೆ ಶಸ್ತ್ರಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗುವುದು. ಶಸ್ತ್ರಚಿಕಿತ್ಸೆಗಾಗಿ ಬರುವವರು ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ತೆರುವುದು. ಶಸ್ತ್ರಚಿಕಿತ್ಸೆ ಔಷಧಗಳು, ಕಣ್ಣಿನಲ್ಲಿ ಅಳವಡಿಸುವ ಔ.ಐ. ಲೆನ್ಸ್, ಊಟ, ತಂಗುವ ಸ್ಥಳ ಹಾಗೂ ಕೊಯಮತ್ತೂರಿಗೆ ಹೋಗಿ ಬರುವ ಬಸ್ ವ್ಯವಸ್ಥೆ ಎಲ್ಲವೂ ಉಚಿತವಾಗಿರುತ್ತದೆ.

ವಿಶೇಷ ಸೂಚನೆಗಳು: ಶಿಬಿರಕ್ಕೆ ಬರುವವರು ಶುದ್ಧವಾಗಿಯೂ, ಮಾಸ್ಕ್ ಧರಿಸಿಕೊಂಡು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎರಡು ದಿವಸಗಳಿಗೆ ಬೇಕಾಗುವ ಬಟ್ಟೆಗಳನ್ನು ತೆಗೆದುಕೊಂಡು ಬರಬೇಕು. ಶಸ್ತ್ರಚಿಕಿತ್ಸೆಗಾಗಿ ಆರಿಸಲ್ಪಡುವ ರೋಗಿಗಳು ಹೃದಯ, ರಕ್ತದ ಒತ್ತಡ, ಅಸ್ತಮಾ, ಸಕ್ಕರೆ ಕಾಯಿಲೆಗಳಿಂದ ನರಳುತ್ತಿದ್ದರೆ ಮುಂಚಿತವಾಗಿಯೇ ವೈದ್ಯರಿಂದ ಶಸ್ತ್ರಚಿಕಿತ್ಸೆಗೆ ಯಾವ ಅಡಚಣೆಯಿಲ್ಲ ಎಂದು ಪ್ರಮಾಣಪತ್ರ ತರುವುದು ಒಳ್ಳೆಯದು. ಹತ್ತಿರ ದೃಷ್ಟಿ, ದೂರದೃಷ್ಟಿ ಮುಂತಾದವುಗಳನ್ನು ಸೂಕ್ತವಾಗಿ ಪರೀಕ್ಷಿಸಿ ಶಿಬಿರ ನಡೆಯುವ ಸ್ಥಳದಲ್ಲಿಯೇ ಉತ್ತಮವಾದ ಕನ್ನಡಕಗಳನ್ನು ಕಡಿಮೆ ದರದಲ್ಲಿ ಕೊಡಲಾಗುವುದು. ತಾಲೂಕಿನ ಕಾಡಂಚಿನ ಗ್ರಾಮಗಳ ಕಣ್ಣಿನ ಸಮಸ್ಯೆಯಿರುವ ಸಾರ್ವಜನಿಕರು ಈ ಸದಾವಕಾಶವನ್ನು ಬಳಸಿಕೊಳ್ಳುವಂತೆ ಅನುಗ್ರಹ ಫೌಂಡೇಷನ್ ಸಂಯೋಜಕ ಕೆ.ರಮೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net