ರೌಡಿ ಶೀಟರ್‌ಗಳಿಗೆ ಎಚ್ಚರಿಕೆ

02-GPT-2
Published on

ಗುಂಡ್ಲುಪೇಟೆ: ರೌಡಿ ಶೀಟರ್‌ಗಳು ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಂಡಿರುವುದು ಕಂಡು ಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಾಹೇಬಗೌಡ ಎಚ್ಚರಿಕೆ ನೀಡಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ರೌಡಿಗಳ ಪರೇಡ್ ನಡೆಸಿದ ಅವರು, ಪೊಲೀಸರು ಸಮಾಜಘಾತಕ ವ್ಯಕ್ತಿಗಳ ಚಟುವಟಿಕೆ ಬಗ್ಗೆ ಕಣ್ಣಿಟ್ಟಿದ್ದು, ಅವರು ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ದೇವರಾಜು, ಮಹದೇವು, ಮುಖ್ಯಪೇದೆಗಳಾದ ಗಂಗಾಧರ್, ಚಿನ್ನಸ್ವಾಮಿ, ರಂಗಸ್ವಾಮಿ, ಪ್ರಭುಸ್ವಾಮಿ, ಲೋಕೇಶ, ಬಸವರಾಜೇಂದ್ರ, ಕುಮಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net