ವಿದ್ಯುತ್ ಪ್ರವಹಿಸಿ ಹಸು ಸಾವು

25-GPT-2
Published on

ಗುಂಡ್ಲುಪೇಟೆ: ತಾಲೂಕಿನ ಕಗ್ಗಳದಹುಂಡಿ ಗ್ರಾಮದಲ್ಲಿ ಶನಿವಾರ ವಿದ್ಯುತ್ ಪ್ರವಹಿಸಿ ಹಸುವೊಂದು ಸಾವಿಗೀಡಾಗಿದೆ. ಗ್ರಾಮದ ಚೇತನ್ ಅವರ ಮನೆಯ ಬಳಿ ಅಳವಡಿಸಿರುವ ಟ್ರಾನ್ಸ್‌ಫಾರ್ಮರ್‌ನಿಂದ ನೆಲಕ್ಕೆ ಹೂಳಿದ್ದ ತಂತಿಯಲ್ಲಿ ವಿದ್ಯುತ್ ಪ್ರವಹಿಸಿದ್ದರಿಂದ ಸಮೀಪದಲ್ಲಿ ಮೇಯುತ್ತಿದ್ದ ಹಸು ಸ್ಥಳದಲ್ಲಿಯೇ ಸಾವಿಗೀಡಾಗಿದೆ.

ಸ್ಥಳಕ್ಕೆ ತೆರಕಣಾಂಬಿ ಪೊಲೀಸರು, ಸೆಸ್ಕ್ ಕಿರಿಯ ಇಂಜಿನಿಯರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಮಹಜರು ನಡೆಸಿದರು. ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು. ಸೆಸ್ಕ್ ಅಧಿಕಾರಿಗಳು ಜಾನುವಾರು ಸಾವಿಗೆ ಪರಿಹಾರ ಕೊಡಿಸುವ ಹಾಗೂ ಟ್ರಾನ್ಸ್‌ಫಾರ್ಮರನ್ನು ಬೇರೆಡೆ ಸ್ಥಳಾಂತರಿಸುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net