

ಗುಂಡ್ಲುಪೇಟೆ: ತಾಲೂಕು ಕಚೇರಿ ಸಭಾಂಗಣದಲ್ಲಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಾಲೂಕು ಆಡಳಿತ ಮತ್ತು ಉಪ್ಪಾರ ಸಮುದಾಯದ ಮುಖಂಡರಿಂದ ಸರಳವಾಗಿ ಭಗೀರಥ ಜಯಂತಿಯನ್ನು ಆಚರಿಸಲಾಯಿತು. ಗ್ರೇಡ್ 2 ತಹಸೀಲ್ದಾರ್ ಮಹೇಶ್, ಪುರಸಭೆ ಮುಖ್ಯಧಿಕಾರಿ ವಸಂತಕುಮಾರ್, ಭಗೀರಥ ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಶಿವಶಂಕರ್, ಉಪಾಧ್ಯಕ್ಷ ಅರಸಶೆಟ್ಟಿ ಪ್ರಧಾನ ಕಾರ್ಯದರ್ಶಿ ರವಿ ಸೇರಿದಂತೆ ಹಲವರು ಇದ್ದರು.