

ಗುಂಡ್ಲುಪೇಟೆಯ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಮೈಸೂರು ವಿವಿ ಆಯೋಜಿಸಿದ್ದ ಚಾಮರಾಜನಗರ ವಲಯ ಮಟ್ಟದ ಪುರುಷರ ಕ್ರೀಡಾಕೂಟದಲ್ಲಿ 7 ಪ್ರಥಮ ಹಾಗೂ 4 ಬೆಳ್ಳಿ ಪದಕ ಗಳಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಡಾ. ಎ.ಆರ್.ಮದನ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕೆ.ಚಂದ್ರಶೇಖರ್, ಪ್ರಾಧ್ಯಾಪಕರಾದ ಪ್ರೊ. ಚಾಮರಾಜು, ಪ್ರಮೋದ್ ಕುಮಾರ್, ಮಲ್ಲುಸ್ವಾಮಿ ಇದ್ದರು.