ಮಹಾಕುಂಭಾಭಿಷೇಕ ಕಾರ್ಯಕ್ರಮ

Published on

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಶುಕ್ರವಾರ ಪಂಚಮುಖಿ ಮಹಾಗಣಪತಿ ಮತ್ತು ನವಗ್ರಹ ದೇವಾಲಯ ಹಾಗೂ ಮಹಾಕುಂಭಾಭಿಷೇಕ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗಿನಿಂದಲೇ ಪ್ರವೀಣ ರಾಘವನ್ ಜಯರಾಂ ಅವರ ನೇತೃತ್ವದಲ್ಲಿ ಮಹಾಕುಂಭಾಭಿಷೇಕ, ಫಲಪಂಚಾಮೃತ, ಮಹಾರುದ್ರಾಭಿಷೇಕ, ಅಲಂಕಾರ, ಪೂರ್ಣಕುಂಭ ಮುಂತಾದ ಧಾರ್ಮಿಕ ಕಾರ್ಯಗಳು ನಡೆಸಲಾಯಿತು. 23ರಂದು ಬೆಳಗ್ಗೆ 11 ಗಂಟೆಗೆ ಭಕ್ತರಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net