ಗುಂಡ್ಲುಪೇಟೆಯಲ್ಲಿ ಮಹಿಳಾ ದಿನಾಚರಣೆ

11-GPT-3
Published on

ಗುಂಡ್ಲುಪೇಟೆ: ಮಹಿಳೆಯರ ಸಬಲೀಕರಣದಿಂದ ಮಾತ್ರ ಸಮಾಜ ಸದೃಢವಾಗಲು ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಮಾವತಿ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಮಹಿಳಾ ಸ್ವ ಸಹಾಯ ಸಂಘಗಳ ವತಿಯಿಂದ ಸೋಮವಾರ ಪಟ್ಟಣದ ಚಿಜಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನಲ್ಲಿ ಆಯೋಜಿಸಿದ್ದ ಮಹಿಳಾ ಕಾನೂನು ಮತ್ತು ಪ್ರಸ್ತುತ ಸವಾಲುಗಳು ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಸಮಾಜ ಸದೃಢವಾಗಲು ಮಹಿಳೆಯರು ಸಬಲರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಹಿಳೆಯರ ಹಕ್ಕುಗಳ ರಕ್ಷಣೆಗೆ ಕಾನೂನುಗಳನ್ನು ಜಾರಿಗೊಳಿಸಿವೆ ಎಂದು ಹೇಳಿದರು.

ವಕೀಲರಾದ ಆಶಾ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ, ಚಿಜಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಮಹದೇವಮ್ಮ ಚಿಜಲ್, ಮಹಿಳಾ ಸಂಯೋಜಕಿ ಪುಟ್ಟಮ್ಮ, ಸಮಷ್ಠಿ ಸಂಸ್ಥೆಯ ಗಂಗಾಧರಸ್ವಾಮಿ, ರೂಟ್ಸ್ ಫಾರ್ ಫ್ರೀಡಂ ಸಂಸ್ಥೆಯ ಜಿಲ್ಲಾ ಸಂಚಾಲಕ ಕುನ್ನಹೊಳಯಯ್ಯ, ಮಣಿಯಮ್ಮ, ಮಹದೇವ ಚಿಜಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net