ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

Crime Logo
Published on

ಗುಂಡ್ಲುಪೇಟೆ: ತಾಲೂಕಿನ ಬಲಚವಾಡಿ ಗ್ರಾಮದಲ್ಲಿ ಗೃಹಿಣಿ ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ನಿವಾಸಿ ಮಂಜುನಾಥ್ ಎಂಬುವರ ಪತ್ನಿ ರೂಪಾ(32) ಮೃತರು. ಆರು ವರ್ಷದ ಹಿಂದೆ ಮಲೆಯೂರಿನಿಂದ ಈಕೆಯನ್ನು ಬಲಚವಾಡಿ ವಿವಾಹ ಮಾಡಿಕೊಡಲಾಗಿದ್ದು, ಒಬ್ಬ ಪುತ್ರ ಇದ್ದಾನೆ. ಪ್ರತಿ ದಿನವೂ ಪತಿ ಕುಡಿದು ಬಂದು ಗಲಾಟೆ ಮಾಡುವುದರ ಜತೆಗೆ ಬೇರೆ ಯುವತಿಯೊಂದಿಗೆ ಆತನಿಗೆ ಜತೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತು ರೂಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತಳ ಸಹೋದರ ದೀಪು ದೂರು ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ತೆರಕಣಾಂಬಿ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net