ವಿದ್ಯುತ್ ಅಕ್ರಮ ಸಂಪರ್ಕ ಪರಿಶೀಲನೆ

IMG-20231006-WA0122
Published on

ಗುಂಡ್ಲುಪೇಟೆ: ಸೆಸ್ಕ್ ಜಾಗೃತ ದಳದ ಅಧಿಕಾರಿಗಳು ತಾಲೂಕಿನ ಕಾಡಂಚಿನ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ವಿದ್ಯುತ್ ಅಕ್ರಮ ಸಂಪರ್ಕ ಪರಿಶೀಲಿಸಿದರು.

ಜಿಲ್ಲಾ ಜಾಗೃತ ದಳದ ಅಧಿಕಾರಿಗಳು ಬೇಗೂರು ಸೆಸ್ಕ್, ಪೊಲೀಸರು ಹಾಗೂ ಓಂಕಾರ ವಲಯದ ಅರಣ್ಯಾಧಿಕಾರಿಗಳ ಜತೆಗೂಡಿ ಹೋಬಳಿಯ ಕಾಡಂಚಿನ ಗ್ರಾಮಗಳಾದ ಹೊರೆಯಾಲ, ಚನ್ನೊಡೆಯನಪುರ, ಯಡವನಹಳ್ಳಿ, ಹೊಣಕನಪುರ, ಶ್ರೀಕಂಠಪುರ, ಹೊಸಪುರ, ಕೋಟೆ ಕೆರೆ, ಕುರುಬರಹುಂಡಿ, ಮಂಚಹಳ್ಳಿ, ನಾಗರತ್ನಮ್ಮ ಕಾಲನಿ, ಆಲತ್ತೂರು, ಸವಕನಹಳ್ಳ ಪಾಳ್ಯ, ಬರಗಿ, ದೇಸಿಪುರ, ಭೋಗಯ್ಯನ ಹುಂಡಿ, ನಾಗಪಟ್ಟಣ, ದೇಶಿಪುರ ಹಾಗೂ ಇತರ 35 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ತಂತಿ ಬೇಲಿಗಳಿಗೆ ಅಕ್ರಮವಾಗಿ ವಿದ್ಯುತ್ ಹರಿಸಿರುವ ಶಂಕೆಯಿದ್ದ ಜಮೀನುಗಳನ್ನು ಪರಿಶೀಲನೆ ಮಾಡಿದರು.

ತಂತಿ ಬೇಲಿಗಳಿಗೆ ಅಕ್ರಮವಾಗಿ ವಿದ್ಯುತ್ ಅಳವಡಿಸಿರುವ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಅಕ್ರಮ ವಿದ್ಯುತ್ತ ಅನ್ನು ತಂತಿ ಬೇಲಿಗಳಿಗೆ ಹರಿಸದಂತೆ ರೈತರಿಗೆ ಜಾಗೃತಿ ಮೂಡಿಸಿದರು. ಜಾಗೃತ ದಳದ ಅಬ್ದುಲ್ ರಹೀಮ್, ವಿಶ್ವನಾಥ್, ಬೇಗೂರು ಎಇಇ ರಾಮಚಂದ್ರ, ಪೊಲೀಸ್ ಇನ್‌ಸ್ಪೆಕ್ಟರ್ ಅಜರುದ್ದೀನ್, ಓಂಕಾರ ವಲಯದ ಆರ್‌ಎಫ್‌ಒ ಸತೀಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net