

ಗುಂಡ್ಲುಪೇಟೆ: ನಮ್ಮ ಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎಂ.ಬಸವರಾಜು ಪಡುಕೋಟೆರ ಸಮ್ಮುಖದಲ್ಲಿ ತಾಲೂಕು ಮತ್ತು ಗ್ರಾಮ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ಭಾನುವಾರ ಆಯ್ಕೆ ಮಾಡಲಾಯಿತು.
ತಾಲೂಕು ಘಟಕದ ಗೌರವಾಧ್ಯಕ್ಷ ಅಬ್ದುಲ್ ಮಾಲೀಕ್, ಅಧ್ಯಕ್ಷ ಶ್ರೀನಿವಾಸನಾಯಕ, ಉಪಾಧ್ಯಕ್ಷರಾಗಿ ರಮೇಶ್‌ಗೌಡ, ನಟರಾಜಗೌಡ, ಪ್ರಧಾನ ಕಾರ್ಯದರ್ಶಿ ಜಗದೀಶ್, ಸಂಘಟನಾ ಕಾರ್ಯದರ್ಶಿ ಪ್ರವೀಣ್, ಪತ್ರಿಕಾ ಕಾರ್ಯದರ್ಶಿ ರಾಜೇಶ್‌ಭಟ್ಟ ಆಯ್ಕೆಯಾದರು. ತೆರಕಣಾಂಬಿ ಹೋಬಳಿ ಘಟಕದ ಅಧ್ಯಕ್ಷ ಚಂದ್ರು, ಉಪಾಧ್ಯಕ್ಷ ಶಂಕರ, ಕಾರ್ಯದರ್ಶಿ ಬಂಗಾರಸ್ವಾಮಿ, ಶಿವಕುಮಾರ್, ಜಗದೀಶ್, ಚಂದ್ರಶೇಖರ್, ರಾಜು, ದೊರೆಸ್ವಾಮಿ, ಬೆಳ್ಳಿನಾಗ, ದೊರೆಸ್ವಾಮಿ, ರಾಜಣ್ಣ, ನಾಗೇಂದ್ರ, ಚಂದ್ರು, ಅಣ್ಣೂರು ಗ್ರಾಮ ಘಟಕ ಅಧ್ಯಕ್ಷ ಮಹದೇವಸ್ವಾಮಿ, ಸದಸ್ಯರು ಶರತ್, ಸೋಮಣ್ಣ(ಮಂಗಲ), ಹೊಸಹಳ್ಳಿಹುಂಡಿ ಗ್ರಾಮ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಅರುಣ್, ಕಾರ್ಯದರ್ಶಿ ಸಂತೋಷ್, ಸಂಘಟನಾ ಕಾರ್ಯದರ್ಶಿ ರಾಜೇಂದ್ರ, ಮನು ಅವರನ್ನು ಆಯ್ಕೆ ಮಾಡಲಾಯಿತು.
ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹರ್ಷವರ್ಧನ್, ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷೆ ಕಾಶಿಯಮ್ಮ, ಕಟ್ಟಡ ಕಾರ್ಮಿಕ ಸಂಘಟನೆ ಅಧ್ಯಕ್ಷ ಗುರುದೊಡ್ಡಮನಿ, ಐಟಿ ಬಿಟಿ ಅಧ್ಯಕ್ಷ ಸಿದ್ದು ಪಡುಕೋಟೆ, ಜಿಲ್ಲಾಧ್ಯಕ್ಷ ಸುರೇಶ್‌ನಾಯಕ, ಉಪಾಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ಎಚ್.ಎಂ.ಉಸ್ಮಾನ್ ಹಾಜರಿದ್ದರು.