ಗುಂಡ್ಲುಪೇಟೆ-ಮೈಸೂರು ತಡೆರಹಿತ ಬಸ್

07-GPT-3
Published on

ಗುಂಡ್ಲುಪೇಟೆ: ಗುಂಡ್ಲುಪೇಟೆಯಿಂದ ಮೈಸೂರಿಗೆ ತಡೆರಹಿತ ಬಸ್ ಪ್ರಯಾಣಕ್ಕೆ ಸೋಮವಾರ ಘಟಕದ ವ್ಯವಸ್ಥಾಪಕ ತ್ಯಾಗರಾಜ್ ಚಾಲನೆ ನೀಡಿದರು.

ಗುಂಡ್ಲುಪೇಟೆಯಿಂದ ಮೈಸೂರಿಗೆ ಯಾವುದೆ ತಡೆಯಿಲ್ಲದೆ ಪ್ರತಿ ಗಂಟೆಗೊಮ್ಮೆ ಈ ತಡೆರಹಿತ ಬಸ್ ಎಲ್ಲಿಯೂ ನಿಲ್ಲದೆ ಪ್ರಯಾಣ ಬೆಳೆಸಲಿದೆ. ಸಾಮಾನ್ಯ ಬಸ್‌ಗಳಲ್ಲಿ ಟಿಕೆಟ್ ದರ 72 ರೂ. ಇದ್ದರೆ ಇದರಲ್ಲಿ 75 ರೂ. ನಿಗದಿಪಡಿಸಲಾಗಿದೆ. ಇದರಲ್ಲಿಯೂ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣವಿದೆ ಎಂದು ವಿವರ ನೀಡಿದರು. ಈ ವೇಳೆ ಎಟಿಎಸ್ ಎಚ್.ಕೆ.ಹರೀಶ್‌ಕುಮಾರ್, ಸಿಬ್ಬಂದಿ ಸೋಮು, ಸ್ವಾಮಿ, ಉಮ್ಮತ್ತೂರಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net