ಮನೆಕಳ್ಳತನ ಪ್ರಕರಣ ದಾಖಲು

Crime Logo
Published on

ಗುಂಡ್ಲುಪೇಟೆ : ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಮನೆಯ ಬೀಗ ಮುರಿದು ನಗನಾಣ್ಯಗಳನ್ನು ಕದ್ದೊಯ್ದಿರುವ ಪ್ರಕರಣ ದಾಖಲಾಗಿದೆ.

ಗ್ರಾಮದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಉದ್ಯೋಗಿ ಹಿರೀಸಾವೆ ಮೂಲದ ವಾಣಿ ಎರಡು ದಿನಗಳಿಂದ ಊರಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ್ದ ದುಷ್ಕರ್ಮಿಗಳು ಬುಧವಾರ ರಾತ್ರಿ ಮನೆಯ ಬೀಗ ಮುರಿದು ಒಳಗೆ ಪ್ರವೇಶಿಸಿ ಬೀರುವಿನಲ್ಲಿ ಇಟ್ಟಿದ್ದ 1,500 ರೂ. ನಗದು ಹಾಗೂ ಚಿನ್ನಾಭರಣ ಕದ್ದೊಯ್ದಿದ್ದಾರೆ. ಈ ಬಗ್ಗೆ ವಾಣಿ ನೀಡಿದ ದೂರು ಸ್ವೀಕರಿಸಿದ ತೆರಕಣಾಂಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net