ತಹಸೀಲ್ದಾರ್ ವಸತಿ ಗೃಹದ ಬಳಿ ಗಂಧದ ಮರ ಕಳ್ಳತನ

IMG-20240823-WA0201
Published on

ಗುಂಡ್ಲುಪೇಟೆ: ಪಟ್ಟಣದ ಕಂದಾಯ ಇಲಾಖೆಯ ತಹಸೀಲ್ದಾರ್ ಅವರ ವಸತಿಗೃಹದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಕಳವು ಮಾಡಿದ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿದೆ.

ತಹಸೀಲ್ದಾರ್ ವಸತಿಗೃಹದ ಕಾಂಪೌಂಡ್ ಒಳಗೆ ಬೆಳೆದಿದ್ದ ಗಂಧದ ಮರವನ್ನು ಶುಕ್ರವಾರ ನಸುಕಿನಲ್ಲಿ ದುಷ್ಕರ್ಮಿಗಳು ಕತ್ತರಿಸಿ ಕದ್ದೊಯ್ದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಲಾಗಿದ್ದು, ಆರೋಪಿಗಳನ್ನು ಪತ್ತೆಮಾಡಲಾಗುವುದು ಎಂದು ಬಫರ್ ವಲಯದ ಪ್ರಭಾರ ಆರ್‌ಎಫ್‌ಒ ಸತೀಶ್ ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net