ಗುಂಡ್ಲುಪೇಟೆ: ತಾಲೂಕಿನ ಕೆಲಸೂರು ಗ್ರಾಮಪಂಚಾಯಿತಿ ಮತ್ತು ಅಂತಾರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆಗಳ ವತಿಯಿಂದ ಬೆಟ್ಟೇಗೌಡನಹುಂಡಿ ಗ್ರಾಮದಲ್ಲಿ ಸ್ವಚ್ಛತಾ ಆಂದೋಲನ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗ್ರಾಮಪಂಚಾಯಿತಿ ಅಧ್ಯಕ್ಷೆ ಚೆನ್ನಾಜಮ್ಮ, ಸಂಸ್ಥೆಯ ಮಧು ಹಾಗೂ ಗ್ರಾಮಸ್ಥರು ಇದ್ದರು.