ಗುಂಡ್ಲುಪೇಟೆ ಶಿಕ್ಷಕಿಯರ ತಂಡ ರಾಷ್ಟ್ರ ಮಟ್ಟಕ್ಕೆ

Published on

ಗುಂಡ್ಲುಪೇಟೆ: ಬೆಂಗಳೂರಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಗುಂಡ್ಲುಪೇಟೆ ಶಿಕ್ಷಕಿಯರ ತಂಡ ಥ್ರೋಬಾಲ್‌ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜಯಪುರ, ಬೆಂಗಳೂರು ನಗರ, ಶಿವಮೊಗ್ಗ, ಕೋಲಾರ, ಹಾಸನ ಮತ್ತು ಫೈನಲ್ ಪಂದ್ಯದಲ್ಲಿ ಚಿಕ್ಕಬಳ್ಳಾಪುರ ತಂಡವನ್ನು ಮಣಿಸಿ ಗುಂಡ್ಲುಪೇಟೆ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಂಡದಲ್ಲಿ ನಾಯಕಿ ಪರಿಮಳಾ, ಜಯಶೀಲಮ್ಮ , ಪ್ರಭಾ, ವಿನುತಾ, ರಶ್ಮಿ, ಪುಷ್ಪಾ, ಮಂಜುಳಾ, ಪೂಜಾ, ನಂದಿನಿ,ವಿದ್ಯಾ, ಶ್ವೇತಾ ಮತ್ತು ಸಲ್ಲೇತ್ ಮೇರಿ ಇದ್ದರು. ಇವರೊಂದಿಗೆ ಮಾರ್ಗದರ್ಶಕರಾದ ಲತಿಷ್ಯ ಚಿನ್ನಪ್ಪ ಮತ್ತು ಅನ್ನಪೂರ್ಣಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net