

ಗುಂಡ್ಲುಪೇಟೆ: ತಾಲೂಕಿನ ಪಡುಗೂರು ಗ್ರಾಮದಲ್ಲಿರುವ ಅಡವಿ ಮಠದ ವತಿಯಿಂದ ಮೈಸೂರಿನಲ್ಲಿ ನಡೆಯುತ್ತಿರುವ ಶ್ರೀಮದ್ದಾನೇಶ್ವರ ವಿದ್ಯಾರ್ಥಿ ನಿಲಯಕ್ಕೆ 2024-25ನೇ ಸಾಲಿನ ಪಿಯುಸಿ, ಡಿಪ್ಲೊಮಾ, ಟಿಸಿಎಚ್. ಬಿ.ಎಡ್. ಪದವಿ, ಸ್ನಾತಕೋತ್ತರ, ಪ್ಯಾರಮೆಡಿಕಲ್, ಬಿ.ಇ. ಎಂಸಿಎ ಮತ್ತು ನಸಿರ್ಂಗ್ ತರಗತಿಗಳಲ್ಲಿ ಓದುತ್ತಿರುವ ವೀರಶೈವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಪ್ರವೇಶ ಅರ್ಜಿಗಳನ್ನು ಮೈಸೂರಿನ ಝಾನ್ಸಿರಾಣಿ ಲಕ್ಷ್ಮಿಬಾಯಿ ರಸ್ತೆಯಲ್ಲಿರುವ ವಿದ್ಯಾರ್ಥಿ ನಿಲಯದ ನಿಲಯ ಪಾಲಕರಿಂದ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ಸಿ.ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.