ಮೆಪ್ಪಾಡಿ ಕಾಳಜಿ ಕೇಂದ್ರಕ್ಕೆ ಶಾಸಕ ಭೇಟಿ

07-GPT-1A
Published on

ಗುಂಡ್ಲುಪೇಟೆ: ಕೇರಳದ ವಯನಾಡಿನ ಮೆಪ್ಪಾಡಿಯಲ್ಲಿರುವ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಂಗಳವಾರ ಭೇಟಿ ನೀಡಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.

ವಯನಾಡಿನಲ್ಲಿ ಭೂ ಕುಸಿತದಿಂದ ತೊಂದರೆಗೊಳಗಾಗಿರುವ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ತೆರಳಿ ವೀಕ್ಷಿಸಿ ಮಾಹಿತಿ ಪಡೆದರು. ನಂತರ ಮೆಪ್ಪಾಡಿಯ ಸಂತ ಜೋಸೆಫ್ ಹೈಸ್ಕೂಲ್‌ನಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಘಟನೆಯ ಬಗ್ಗೆ ಮಾಹಿತಿ ಪಡೆದು ಕೇರಳ ಹಾಗೂ ಕರ್ನಾಟಕ ಸರ್ಕಾರ ಅಗತ್ಯ ನೆರವು ನೀಡಲಿವೆ ಎಂದು ಭರವಸೆ ನೀಡಿದರು. ಅಲ್ಲಿ ಆಶ್ರಯ ಪಡೆದಿರುವ 40 ಕನ್ನಡಿಗ ಸಂತ್ರಸ್ತರಿಗೆ ಎಚ್.ಎಸ್.ಮಹದೇವ ಪ್ರಸಾದ್ ಟ್ರಸ್ಟ್ ವತಿಯಿಂದ ತಲಾ 10 ಸಾವಿರ ರೂ.ನಗದು ಹಾಗೂ ಹೊದಿಕೆಗಳನ್ನು ವಿತರಿಸಿದರು.

ವಯನಾಡು ಜಿಲ್ಲಾಧಿಕಾರಿ ಡಿ.ಆರ್.ಮೇಘಾಶ್ರೀ, ಪುರಸಭೆ ಸದಸ್ಯ ಮಧು, ಗ್ರಾಮ ಪಂಚಾಯಿತಿ ಸದಸ್ಯ ಗುರು ವೀರನಪುರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶೈಲೇಶ ಕುಮಾರ್, ತಾಲೂಕು ಮಾಜಿ ಅಧ್ಯಕ್ಷ ವಿ.ನಾ.ಚಿದಾನಂದ, ಜಿಪಂ ಮಾಜಿ ಸದಸ್ಯ ಮಹೇಶ್, ತಾಪಂ ಮಾಜಿ ಅಧ್ಯಕ್ಷ ನಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net