

ಗುಂಡ್ಲುಪೇಟೆ: ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ ಸಚ್ಚಿದಾನಂದ ಸ್ವಾಮೀಜಿ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿ ಗೋಪಾಲಸ್ವಾಮಿಯ ದರ್ಶನ ಪಡೆದರು.
ಶ್ರೀಗಳೊಂದಿಗೆ ಆಶ್ರಮ ಶಾಲೆಯ ನೂರಾರು ವಿದ್ಯಾರ್ಥಿಗಳು ದೇವರ ದರ್ಶನ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ದೇಶ ಸುಭಿಕ್ಷವಾಗಿರಲೆಂದು ಪ್ರಾರ್ಥಿಸಲಾಗಿದೆ. ಹಿಮವದ್ ಗೋಪಾಲಸ್ವಾಮಿ ದರ್ಶನ ಪಡೆದು ಸಂತೋಷವಾಯಿತು. ಇದೊಂದು ಪುಣ್ಯ ಸ್ಥಳ. ಇಂತಹ ಅದ್ಭುತ ಜಾಗ ಭೂಮಿಯ ಮೇಲಿನ ಸ್ವರ್ಗವಿದ್ದಂತೆ ಎಂದು ಬಣ್ಣಿಸಿದರು ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ಟರು ಮತ್ತಿತರರು ಇದ್ದರು.