

ಗುಂಡ್ಲುಪೇಟೆ: ನಾನಾ ಇಲಾಖೆಗಳ ವಿಶೇಷ ಅನುದಾನದಲ್ಲಿ ಪಟ್ಟಣದ ಹಿಂದುಳಿದ ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಪಟ್ಟಣದ ಮಹದೇವಪ್ರಸಾದ್ ನಗರ ಬಡಾವಣೆಯಲ್ಲಿ 3 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರಕ್ಕೆ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ 5 ಕೋಟಿ ರೂ. ಅನುದಾನ ತಂದಿದ್ದು, ವಿಶೇಷ ಹಣದಲ್ಲಿ ಮಹದೇವಪ್ರಸಾದ್ ನಗರ, ಜಾಕೀರ ಹುಸೇನ್ ನಗರ, ತಾಲೂಕಿನ ಕಗ್ಗಳದಹುಂಡಿ ಹಾಗೂ ತೆರಕಣಾಂಬಿ ಗ್ರಾಮಗಳನ್ನು ಒಳಗೊಂಡಂತೆ 5 ಕೋಟಿ ರೂ. ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ವಾರ್ಡ್‌ಗಳ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು. ಪುರಸಭೆ ಸದಸ್ಯರಾದ ಸಾಜಿದಾ ಬೇಗಂ, ರಾಜಗೋಪಾಲ, ಎಚ್.ಆರ್.ಇಲಿಯಾಸ್, ಎನ್.ಕುಮಾರ್, ಕಣ್ಣಪ್ಪ, ಮುಖ್ಯಾಧಿಕಾರಿ ವಸಂತ ಕುಮಾರಿ ಹಾಗೂ ಇತರರು ಇದ್ದರು.