

ಗುಂಡ್ಲುಪೇಟೆ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಸೋಮವಾರ ಆಚರಿಸಲಾಯಿತು.
ಪಟ್ಟಣದ ಚಾಮರಾಜನಗರ ಜೋಡಿ ರಸ್ತೆಯಲ್ಲಿರುವ ಶಕ್ತಿಶಾಲಿ ಆಂಜನೇಯ ದೇವಸ್ಥಾನ, ತೆರಕಣಾಂಬಿಯ ಆಂಜನೇಯ, ವಾಲಿ, ಸುಗ್ರೀವ ಹಾಗೂ ತೆರಕಣಾಂಬಿ ಹುಂಡಿ ಕೊತ್ತಲವಾಡಿ ರಸ್ತೆಯ ಶೃಂಗಾರಾಂಜನೇಯ ದೇವಾಯಲಗಳಲ್ಲಿ ಹನುಮ ಜಯಂತಿ ಆಚರಿಸಲಾಯಿತು. ದೇವಾಲಯಗಳಿಗೆ ಕೇಸರಿ ಧ್ವಜ ಹಾಗೂ ವಿವಿಧ ವರ್ಣದ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಈ ಅಂಗವಾಗಿ ಆಂಜನೇಯನ ಮೂರ್ತಿಗಳಿಗೆ ವಿಶೇಷ ಪೂಜೆ ನಡೆಸಲಾಯಿತು. ಪಟ್ಟಣದ ನಿವಾಸಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ತೆರಕಣಾಂಬಿ ಗ್ರಾಮದಲ್ಲಿ ಬ್ಯಾಂಡ್ ಹಾಗೂ ನಗಾರಿ ವಾದನಗಳೊಂದಿಗೆ ಆಂಜನೇಯರ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.