

ಗುಂಡ್ಲುಪೇಟೆ: ತಾಲೂಕಿನ ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಮಗ ಮತ್ತು ಮಗಳು ಹೋಗುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿರಂಜನಕುಮಾರ್ ಪುತ್ರ ಭುವನ್ ಹಾಗೂ ಪುತ್ರಿ ನಿಹಾರಿಕಾ ಪಟ್ಟಣದಿಂದ ಮೈಸೂರಿನತ್ತ ಪ್ರಯಾಣಿಸುತ್ತಿದ್ದ ಕಾರಿಗೆ ಎದುರಿನಿಂದ ಬರುತ್ತಿದ್ದ ಕೇರಳ ಮೂಲದ ಪ್ರಯಾಣಿಕರಿದ್ದ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ. ಪಟ್ಟಣದ ಪೊಲೀಸರು ಎರಡು ಕಾರುಗಳನ್ನು ಠಾಣೆಗೆ ಕೊಂಡೊಯ್ದರು.