ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

27-GPT-1
Published on

ಗುಂಡ್ಲುಪೇಟೆ: ತಾಲೂಕಿನ ಕೋಟೆಕೆರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗುರು (ವೀರತ್ತಪ್ಪ), ಉಪಾಧ್ಯಕ್ಷರಾಗಿ ರಾಜಮ್ಮ ಅವಿರೋಧವಾಗಿ ಆಯ್ಕೆಯಾದರು.

ಎರಡೂ ಸ್ಥಾನಗಳಿಗೂ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗೇಶ್ ತಿಳಿಸಿದರು. ನಿರ್ದೇಶಕರಾದ ಬಿ.ಎನ್.ಗಣೇಶ್, ಶಿವನಾಗಪ್ಪ, ನಾಗರಾಜು, ಕಾಳಮ್ಮ, ಗುರುತಾಯಮ್ಮ, ಚಿಕ್ಕನಾಯಕ, ಮಹದೇವಯ್ಯ, ಬಸವಾಚಾರ್ ಇದ್ದರು. ಮುಖಂಡರಾದ ಕೆ.ಆರ್.ಲೋಕೇಶ್, ಬಾಬುಪ್ರಸಾದ್, ವಿಶ್ವನಾಥ್, ಶಿವರಾಜು ಸೇದಂತೆ ಹಲವರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net