

ಸಿಂಧನೂರು: ತುರ್ವಿಹಾಳ ಪಟ್ಟಣದಲ್ಲಿ ಸರ್ವೇಶ್ವರ ಮಠದ ಶ್ರೀ ಗುಂಡಯ್ಯ ಅಪ್ಪಾಜಿ ಅವರ 15ನೇ ವರ್ಷದ ಪುರಾಣ ಪ್ರವಚನ ಮಹಾಮಂಗಲ, ಕುಂಭೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಇದನ್ನೂ ಓದಿ:ಮಸ್ಕಿಯಲ್ಲಿ ಮಹಿಳೆಯರಿಂದ ಕುಂಭೋತ್ಸವ
ಐದು ದಿನಗಳ ಕಾಲ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀ ಗುಂಡಯ್ಯ ಅಪ್ಪಾಜಿ ಅವರಿಗೆ ತುಲಾಭಾರ ಹಾಗೂ ಪುಷ್ಪ ನಮನ ಕಾರ್ಯಕ್ರಮದೊಂದಿಗೆ ಪುರಾಣ ಮಂಗಲ ಮಾಡಲಾಯಿತು. ಕುಂಭ, ಕಳಸ ಹಾಗೂ ಜನಪದ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುಂಡಯ್ಯ ಅಪ್ಪಾಜಿ ಅವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ಸರ್ವೇಶ್ವರ ಮಠದ ಗುಂಡಯ್ಯ ಅಪ್ಪಾಜಿ, ಮಂಜುನಾಥ ಅಪ್ಪಾಜಿ, ಅಮೋಘ ರೇವಣ್ಣ ಮಠದ ಮಾದಯ್ಯ ಗುರುವಿನ, ಚಿದಾನಂದಯ್ಯ, ಪರವರಮಠದ ಅಮರಗುಂಡಯ್ಯ ಶಿವಾಚಾರ್ಯರು, ಪುರವರ ಮಠದ ಪೀಠಾಧಿಪತಿ ಅಮರಗುಂಡಯ್ಯ ಶಿವಾಚಾರ್ಯರು, ಶಾಸಕ ಆರ್.ಬಸನಗೌಡ ತುರ್ವಿಹಾಳ, ಪಪಂ ಅಧ್ಯಕ್ಷ ಬಾಪುಗೌಡ ದೇವರಮನಿ, ಪ್ರಮುಖರಾದ ರಾಯನಗೌಡ ದೇಸಾಯಿ, ಚನ್ನಬಸವ ದೇಸಾಯಿ, ಮೌಲಪ್ಪಯ್ಯ ಗುತ್ತೇದಾರ್, ಶೇಖರಗೌಡ ದೇವರಮನಿ, ಪಂಪನಗೌಡ ಕಲಮಂಗಿ, ಉಮರ್ ಸಾಬ್ ಅರಬ್, ದೀಪಕ್, ಪ್ರವಚನಕಾರ ಜ್ಞಾನ ಚಕ್ರವರ್ತಿ ಸ್ವಾಮಿ ಹಿರೇಮಠ, ಸಂಗೀತಗಾರ ಶರಣಬಸವ ಹಳ್ಳಿ, ತಬಲ ವಾದಕ ಹನುಮಂತರಾಯ ಚಿಕ್ಕ ಕೊಟ್ನೆಕಲ್, ಕೀಬೋರ್ಡ್ ವಾದಕ ಕೆ.ರಾಮು, ಪ್ಯಾಡ್ ವಾದಕ ಶಂಕರ್ ಅಂಬಾಸ್ ಇತರರಿದ್ದರು.