ಜಾತ್ರೆಯ ಹೆಸರಿನಲ್ಲಿ ಅವೈಜ್ಞಾನಿಕ ಆಚರಣೆ: ಗುಂಡಾಪುರ ಗ್ರಾಮಸ್ಥ ಮಹೇಶ್ ಆರೋಪ

Gundapur villagers press conference Mandya
Published on

ಮಂಡ್ಯ: ಮಳವಳ್ಳಿ ತಾಲೂಕು ಗುಂಡಾಪುರ ಗ್ರಾಮದ ಬೆಟ್ಟದರಸಮ್ಮ ದೇವಾಲಯದ ಜಾತ್ರೆಯ ವೇಳೆ ನಡೆಸಲಾಗುವ ಅನಾಗರಿಕ ಹಾಗೂ ಅವೈಜ್ಞಾನಿಕ ಆಚರಣೆಯನ್ನು ಜಿಲ್ಲಾಡಳಿತ ರದ್ದುಗೊಳಿಸಬೇಕೆಂದು ಗ್ರಾಮಸ್ಥ ಮಹೇಶ್ ಒತ್ತಾಯಿಸಿದರು.

ಕೆಲವರು ಗ್ರಾಮದಲ್ಲಿ ತಮ್ಮದೇ ಕಾನೂನು ಮಾಡಿಕೊಂಡು ಒಂದೊಂದು ದಿನ ಬೇರೆ ಬೇರೆ ಉತ್ಸವ ಆಚರಿಸುತ್ತಿದ್ದಾರೆ. ಗ್ರಾಮದೇವತೆಗೆ ಪ್ರಿಯವಾದುದೆಂದು ಹೇಳಿ ಹಬ್ಬ ಆಚರಿಸುವ 7 ಗ್ರಾಮದ ಜನರ ಮೇಲೆ ಹೆಂಡ, ಗಾಂಜಾ ಸೇವನೆ ಮಾಡಿದ ಗೂಳಿ ಬಿಡುವುದು, ಬಾಯಿ ಚುಚ್ಚಿಕೊಂಡು 2 ಕಿ.ಮೀ ನಡೆದುಕೊಂಡು ಹೋಗುವುದು, ಮುಟ್ಟಾದ ಮಹಿಳೆಯರು ಹಾಗೂ ಸಾವಾದ ಮನೆಯ ಕುಟುಂಬದವರನ್ನು ಗ್ರಾಮದಿಂದ ಹೊರಗಿಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ದೈವದ ಹೆಸರಿನಲ್ಲಿ ಅಕ್ರಮಗಳನ್ನು ನಡೆಸುತ್ತಿರುವುದರಿಂದ ಗ್ರಾಮದಲ್ಲಿ ಅಶಾಂತಿಯುಂಟಾಗಿದೆ. ನೆಪ ಮಾತ್ರಕ್ಕೆ ಹಬ್ಬದ ಆಚರಣೆ ಮಾಡಲಾಗುತ್ತಿದೆ. ಆದ್ದರಿಂದ ಜಿಲ್ಲಾಡಳಿತ, ಚುನಾಯಿತ ಜನಪ್ರತಿನಿಧಿಗಳು ಕೂಡಲೇ ಆಚರಣೆ ರದ್ದುಗೊಳಿಸುವ ಕ್ರಮ ವಹಿಸಿ, ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಈ ಮೂಲಕ ಗ್ರಾಮಸ್ಥರೆಲ್ಲರೂ ನೆಮ್ಮದಿಯಿಂದ ಜಾತ್ರಾ ಮಹೋತ್ಸವ ಆಚರಿಸಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net