

ಯಾದಗಿರಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮ್ರತಪಟ್ಟ ಘಟನೆ ಶಹಾಪುರ ತಾಲೂಕಿನ ಗುಂಡಾಪುರ ಗ್ರಾಮದ ಗುರುವಾರ ರಾತ್ರಿ ನಡೆದಿದೆ.
ಕೆಎ.05.ಎಎಫ್ 6304 ಸಂಖ್ಯೆಯ ಬಿಳಿ ಬಣ್ಣದ ಸಿಫ್ಟ್ ಡಿಸೈರ್ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಶರಣಬಸವ ಅಂಗಡಿ (24), ಶರಣು ಕೂಡ್ಲಿಗಿ (24), ವಿಶ್ವನಾಥ ಘಂಟಿ (23) ಹಾಗೂ ತಿರುಪತಿ (28) ಅಪಘಾತದಲ್ಲಿ ಮೃತಪಟ್ಟವರು. ಅಪಘಾತದಿಂದ ಕಾರು ನುಜ್ಜುಗುಜ್ಜಾಗಿದೆ.ಮೃತರೆಲ್ಲರೂ ಸುರಪುರ ತಾಲೂಕಿನ ನಗನೂರ ಗ್ರಾಮದವರು ಎಂದು ತಿಳಿದು ಬಂದಿದೆ.
ಕೆಲಸದ ನಿಮಿತ್ತ ಶಹಾಪುರಕ್ಕೆ ಆಗಮಿಸಿ ವಾಪಸ್ ಊರಿಗೆ ತೆರಳುವ ವೇಳೆ ದುರ್ಘಟನೆಯಲ್ಲಿ ನಡೆದಿದೆ. ಅಲ್ಲದೆ ಈ ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಗೋಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.