ಕಡಗಂಚಿ ಗ್ರಾಮದಲ್ಲಿ ಯುವಕನ ಮೇಲೆ ಗುಂಡಿನ ದಾಳಿ

IMG-20240926-WA0025
Published on

ಕಲಬುರಗಿ: ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಬುಧವಾರ ರಾತ್ರಿ ಪಾರ್ಟಿ ನಡೆಸುವ ವೇಳೆ ಉಂಟಾದ ಜಗಳದಲ್ಲಿ ಯುವಕನೊಬ್ಬನ ಮೇಲೆ ಫೈರಿಂಗ್ ಮಾಡಿದ ಘಟನೆ ನಡೆದಿದೆ.

ಶ್ರೀಕಾಂತ್ (28) ಮೇಲೆ ಗುಂಡಿನ ದಾಳಿಗೆ ಒಳಗಾದ ಯುವಕ. ಶ್ರೀಕಾಂತ್‌ನ ಎಡಗೈಗೆ ಗುಂಡು ತಾಗಿದೆ. ಕಳೆದ ರಾತ್ರಿ ಕಡಗಂಚಿ ಗ್ರಾಮದ ಮನೆಯೊಂದರಲ್ಲಿ ಪಾರ್ಟಿ ಮಾಡ್ತಿರೋ ವೇಳೆ ಗುಂಡಿನ ದಾಳಿ ನಡೆಸಲಾಗಿದೆ.

ಶ್ರೀಕಾಂತ್, ಮಾಳಪ್ಪ, ಕಾಂತಪ್ಪ ಸೇರಿದಂತೆ ನಾಲ್ಕೈದು ಜನ ಸೇರಿಕೊಂಡು ಪಾರ್ಟಿ ಮಾಡ್ತಿದ್ದರು. ಪಾರ್ಟಿ ವೇಳೆ ಜಗಳ ಉಂಟಾಗಿ ಶ್ರೀಕಾಂತ್ ಮೇಲೆ ಗುಂಡಿನ ದಾಳಿ ನಡೆದಿದೆ.

ಗುಂಡಿನ ದಾಳಿ ಮಾಡಿದ ಗನ್ ಸಹಿತ ಆರೋಪಿಗಳಾದ
ಕಾಂತಪ್ಪ ಮತ್ತು ಮಾಳಪ್ಪ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿರೋ ಪೊಲೀಸರು. ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net