

ಮಡಿಕೇರಿ:
ಕೂರ್ಗ್ ಬೈ ರೇಸ್ ಮತ್ತು ಜಮ್ಮ ಹಿಡುವಳಿಯ ಆಧಾರದಲ್ಲಿ ಬಂದಿರುವ ಕೋವಿಯ ವಿಶೇಷ ಹಕ್ಕುದಾರಿಕೆಯನ್ನು ಕೊಡವರು ಶಾಶ್ವತವಾಗಿ ಉಳಿಸಿಕೊಳ್ಳುವತ್ತ ಸಂವಿಧಾನ ಬದ್ಧತೆ ರೂಪಿಸಿಕೊಳ್ಳಬೇಕಾದದ್ದು ಇಂದಿನ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಜೆಸಿಐ ಪೊನ್ನಂಪೇಟೆ ವತಿಯಿಂದ ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ನಡೆದ ಅಕಾಡೆಮಿಯ ಮೊದಲ ತೋಕ್ ನಮ್ಮೆ ಉದ್ಘಾಟಿಸಿ ಮಾತನಾಡಿದರು.
ಕೋವಿಯ ಬಳಕೆ ಮತ್ತು ಪಾವಿತ್ರ‍್ಯತೆಯ ಬಗ್ಗೆ ತಿಳಿದುಕೊಳ್ಳುವುದು ಮತ್ತು ಮುಂದಿನ ಪೀಳಿಗೆಗೆ ತಿಳಿ ಹೇಳುವುದು ನಮ್ಮ ಕರ್ತವ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಚೊಟ್ಟೆಕಮಾಡ ರಾಜೀವ್ ಬೋಪಯ್ಯ ಮಾತನಾಡಿ, ಅನಾದಿಕಾಲದಿಂದ ಬಂದಿರುವ ಸಂಪ್ರದಾಯ ಮತ್ತು ಜೀವನ ಕ್ರಮವನ್ನು ಬದ್ಧತೆಯಿಂದ ಪರಿಪಾಲಿಸುತ್ತಿರುವ ಕೊಡವ ಬಾಷಿಕ ಜನಾಂಗಗಳು ಒಗ್ಗಟ್ಟಿನಿಂದ ಹಕ್ಕುದಾರಿಕೆಯನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ವಕೀಲ ಬಲ್ಯಮಡ ಬಿ. ಮಾದಪ್ಪ "ಕೊಡವಡ ತೋಕ್'ರ ಹಕ್ಕ್ದಾರಿಕೆ ಪಿಞ್ಞ ರಕ್ಷಣೆ" ಎಂಬ ವಿಚಾರವಾಗಿ ಪ್ರಬಂಧ ಮಂಡಿಸಿ ಮಾತನಾಡಿ, ಕೊಡವ ಸೇರಿದಂತೆ ಮೂಲನಿವಾಸಿ ಕೊಡವ ಭಾಷಿಕರಿಗೆ ತಮ್ಮ ತಾಯ್ನೆಲದಲ್ಲಿ ಇರುವ ಹಕ್ಕುದಾರಿಕೆ, ಸಂಪ್ರದಾಯ ಮತ್ತು ಉಡುಗೆ ತೊಡಗೆಗಳನ್ನು ಕಾನೂನಾತ್ಮಕವಾಗಿ ರಕ್ಷಿಸಿಕೊಳ್ಳಬೇಕಾಗಿದೆ. ಕೊಡವರಿಗಿರುವ ತಾಯ್ನೆಲ ಕೊಡಗು ಮಾತ್ರ. ಕೊಡವರ ಹಕ್ಕುದಾರಿಗೆ, ಸಂಪ್ರದಾಯಗಳು ಈ ನೆಲದ ಅಸ್ಮಿತೆಯಾಗಿದ್ದು ಇಂದಿನ ಸ್ಥಿತಿಗತಿಗೆ ಹೊಂದಿಕೊAಡAತೆ ಕೊಡವರು ಎಲ್ಲಿಯೇ ಇದ್ದರೂ ತಮ್ಮತನವನ್ನು ಕಾಯ್ದುಕೊಳ್ಳುತ್ತಿರುವುದು ಶ್ಲಾಘನೀಯ. ಕೊಡವರಿಗೆ ತಮ್ಮದೇ ಆದ ಸಂಸ್ಕೃತಿ, ಸಂಪ್ರದಾಯಗಳು ಇದೆ. ಕೊಡವರಿಗೆ ಕೋವಿಯ ಹಕ್ಕುದಾರಿಕೆ ಅನಾದಿಕಾಲದಿಂದಲೂ ಬಂದಿರುವAಥÀದ್ದು. ಕೊಡವರ ಧೈರ್ಯ-ಸ್ಥೈರ್ಯದೊಂದಿಗೆ ಶಿಸ್ತು, ಶಿಷ್ಟಾಚಾರದ ಭಾಗವಾಗಿ ಲಭ್ಯವಾದ ಕೋವಿಯ ಹಕ್ಕುದಾರಿಕೆ ಸಂಸ್ಕೃತಿಯ ಭಾಗವಾಗಿದ್ದು ಇದನ್ನು ಶಾಸನಬದ್ದಗೊಳಿಸುವುದರ ಮೂಲಕ ರಕ್ಷಿಸಿಕೊಳ್ಳಬೇಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಜೆಸಿಐ ಪೊನ್ನಂಪೇಟೆ ಅಧ್ಯಕ್ಷ ಪೆಮ್ಮಂಡ ಮಂಜು ಬೋಪಣ್ಣ, ಕಾವೇರಿ ಅಸೋಸಿಯೇಶನ್ ಅಧ್ಯಕ್ಷ ಕಾಳಪಂಡ ಟಿಪ್ಪು ಬಿದ್ದಪ್ಪ, ಅಖಿಲ ಅಮ್ಮ ಕೊಡವ ಸಮಾಜದ ಬಾನಂಡ ಪ್ರಥ್ಯು, ಕಳಪಂಡ ಸಿ. ಸುದೀರ್, ಜೆಸಿಐ ವಲಯ ನಿರ್ದೇಶಕ ಪಾರುವಂಗಡ ದಿಲನ್ ಚಂಗಪ್ಪ, ಯೋಜನಾ ನಿರ್ದೇಶಕ ಚೋನಿರ ಬಿ. ಸೋಮಣ್ಣ, ಜೆಸಿಐ ನಿರ್ದೇಶಕ ಅಪ್ಪಂಡೇರAಡ ದಿನು, ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ, ಅಕಾಡೆಮಿ ಸದಸ್ಯರಾದ ಕೊಂಡಿಜಮ್ಮನ ಬಾಲಕೃಷ್ಣ, ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಯಂದಿರ ಶಿವಾಜಿ, ಮೊಳ್ಳೆಕುಟ್ಟಡ ದಿನು ಬೋಜಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ಕಂಬೆಯAಡ ಡೀನ ಬೋಜಣ್ಣ, ಜೆಸಿಐ ಸದಸ್ಯರು ಹಾಜರಿದ್ದರು.