ಗಲ್ಫ್ ಮೆಡಿಕಲ್ ಯೂನಿವರ್ಸಿಟಿ: ಪೋಲೆಂಡ್‌ನ ಲುಬ್ಲಿನ್‌ನಲ್ಲಿ ಘಟಿಕೋತ್ಸವ

ಇತ್ತೀಚೆಗೆ ಪೋಲೆಂಡ್‌ನ ಲುಬ್ಲಿನ್‌ನಲ್ಲಿ ನಡೆದ ಘಟಿಕೋತ್ಸವದಲ್ಲಿ ನೂತನ ಪದವೀಧರರಿಗೆ ಪದವಿ ಪ್ರದಾನಿಸಲಾಯಿತು. ಯೂನಿವರ್ಸಿಟಿಯ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯಿದ್ದೀನ್, ಚಾನ್ಸಲರ್ ಪ್ರೊ. ಮುಂಬಾ ವೆಂಕಟರಮಣ, ರೆಕ್ಟರ್ ಪ್ರೊ. ವೊಯ್ಚೆಕ್ ಝಾಲುಸ್ಕಾ ಉಪಸ್ಥಿತರಿದ್ದರು.
ಇತ್ತೀಚೆಗೆ ಪೋಲೆಂಡ್‌ನ ಲುಬ್ಲಿನ್‌ನಲ್ಲಿ ನಡೆದ ಘಟಿಕೋತ್ಸವದಲ್ಲಿ ನೂತನ ಪದವೀಧರರಿಗೆ ಪದವಿ ಪ್ರದಾನಿಸಲಾಯಿತು. ಯೂನಿವರ್ಸಿಟಿಯ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯಿದ್ದೀನ್, ಚಾನ್ಸಲರ್ ಪ್ರೊ. ಮುಂಬಾ ವೆಂಕಟರಮಣ, ರೆಕ್ಟರ್ ಪ್ರೊ. ವೊಯ್ಚೆಕ್ ಝಾಲುಸ್ಕಾ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹತ್ತು ವರ್ಷಗಳ ಅವಧಿಯಲ್ಲಿ ಒಟ್ಟು 90 ವೈದ್ಯರನ್ನು ರೂಪಿಸಲಾಗಿದೆ
  • 62 ದೇಶಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ದಾಖಲಾತಿ
  • ಯುಎಇ ಹಾಗೂ ಯುರೋಪ್ ಎರಡೂ ಕಡೆಯಲ್ಲಿ ವೈದ್ಯಕೀಯ ಶಿಕ್ಷಣ
  • ಮಂಗಳೂರು: ಯುಎಇಯ ಅಜ್ಮಾನ್‌ನಲ್ಲಿರುವ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (ಜಿಎಂಯು) ಮತ್ತು ಪೋಲೆಂಡ್‌ನ ಮೆಡಿಕಲ್ ಯೂನಿವರ್ಸಿಟಿ ಆಫ್ ಲುಬ್ಲಿನ್ ನಡುವಿನ ಶೈಕ್ಷಣಿಕ ಸಹಭಾಗಿತ್ವದಡಿ ನಡೆಯುತ್ತಿರುವ ಪ್ರತಿಷ್ಠಿತ ತುಂಬೆ ಇಂಟರ್ ನ್ಯಾಷನಲ್ ಪಾಥ್‌ವೇ ಪೋಲೆಂಡ್ ಕಾರ್ಯಕ್ರಮವು ತನ್ನ ಯಶಸ್ವಿ ದಶಕೋತ್ಸವವನ್ನು ಆಚರಿಸುತ್ತಿದೆ. ಈ ಹತ್ತು ವರ್ಷಗಳ ಅವಧಿಯಲ್ಲಿ ಈ ಕಾರ್ಯಕ್ರಮವು ಒಟ್ಟು 90 ವೈದ್ಯರನ್ನು ರೂಪಿಸಿದ್ದು, ಅವರೆಲ್ಲರೂ ಇಂದು ಜಗತ್ತಿನ ವಿವಿಧ ದೇಶಗಳಲ್ಲಿ ಆರೋಗ್ಯ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಪೋಲೆಂಡ್‌ನ ಲುಬ್ಲಿನ್‌ನಲ್ಲಿ ನಡೆದ ಘಟಿಕೋತ್ಸವದಲ್ಲಿ ನೂತನ ಪದವೀಧರರಿಗೆ ಪದವಿ ಪ್ರದಾನಿಸಲಾಯಿತು.

    ದೂರದೃಷ್ಟಿಯ ಕಲ್ಪನೆ

    ತುಂಬೆ ಗ್ರೂಪ್ ಹಾಗೂ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯಿದ್ದೀನ್ ಅವರು ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಯುಎಇಯ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ವೈದ್ಯಕೀಯ ವೃತ್ತಿ ಜೀವನದತ್ತ ನೇರ ಮತ್ತು ನಂಬಿಕಸ್ಥ ಮಾರ್ಗವನ್ನು ಒದಗಿಸಬೇಕು ಎನ್ನುವ ದೂರದೃಷ್ಟಿಯ ಕಲ್ಪನೆಯೇ ಈ ಕಾರ್ಯಕ್ರಮದ ಅಡಿಪಾಯವಾಗಿದೆ ಎಂದರು.

    ಜಿಎಂಯು ಚಾನ್ಸಲರ್ ಪ್ರೊ. ಮುಂಬಾ ವೆಂಕಟರಮಣ, ಮೆಡಿಕಲ್ ಯೂನಿವರ್ಸಿಟಿ ಆಫ್ ಲುಬ್ಲಿನ್‌ನ ರೆಕ್ಟರ್ ಪ್ರೊ. ವೊಯ್ಚೆಕ್ ಝಾಲುಸ್ಕಾ ಅವರು ಮಾತನಾಡಿದರು.

    ವಿದ್ಯಾರ್ಥಿಗಳು ಮೊದಲ 3 ವರ್ಷ ಯುಎಇಯ ಅಜ್ಮಾನ್‌ನಲ್ಲಿರುವ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಪೂರ್ವ-ಕ್ಲಿನಿಕಲ್ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಾರೆ. ಅನಂತರದ 3 ವರ್ಷ ಪೋಲೆಂಡ್‌ನ ಮೆಡಿಕಲ್ ಯೂನಿವರ್ಸಿಟಿ ಆಫ್ ಲುಬ್ಲಿನ್‌ಗೆ ವರ್ಗಾವಣೆಗೊಂಡು, ಅಲ್ಲಿ ಕ್ಲಿನಿಕಲ್ ತರಬೇತಿಯನ್ನು ಪೂರ್ಣಗೊಳಿಸಿ ಎಂ.ಡಿ. (ಡಾಕ್ಟರ್ ಆಫ್ ಮೆಡಿಸಿನ್) ಪದವಿಯನ್ನು ಪಡೆದುಕೊಳ್ಳುತ್ತಾರೆ.

    2022ರಲ್ಲಿ ಈ ಕಾರ್ಯಕ್ರಮಕ್ಕೆ ಶೈಕ್ಷಣಿಕ ಮಾನ್ಯತೆಯನ್ನು ನವೀಕರಿಸಲಾಗಿದ್ದು, ಇದನ್ನು ಹೈಯರ್ ಡಿಪ್ಲೊಮಾ ಇನ್ ಪ್ರಿ-ಕ್ಲಿನಿಕಲ್ ಸೈನ್ಸಸ್ ಕಾರ್ಯಕ್ರಮವಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ಯುಎಇ ಹಾಗೂ ಯುರೋಪ್ ಎರಡೂ ಕಡೆಯ ವೈದ್ಯಕೀಯ ಶಿಕ್ಷಣ ವ್ಯವಸ್ಥೆಗಳ ಜಾಗತಿಕ ಅನುಭವವನ್ನು ಒಂದೇ ಕಾರ್ಯಕ್ರಮದಡಿ ಪಡೆಯುವ ಅಪರೂಪದ ಅವಕಾಶ ಸಿಕ್ಕಂತಾಗಿದೆ.

    ಜಾಗತಿಕ ಮನ್ನಣೆ

    2017ರಿಂದ ಇಂದಿನವರೆಗೆ ಒಟ್ಟು 62 ದೇಶಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ದಾಖಲಾತಿ ಪಡೆದಿದ್ದಾರೆ. ಪ್ರಸ್ತುತ 45ಕ್ಕೂ ಹೆಚ್ಚು ರಾಷ್ಟ್ರೀಯತೆಗಳಿಗೆ ಸೇರಿದ ವಿದ್ಯಾರ್ಥಿಗಳು ಜಿಎಂಯುನಲ್ಲಿ ಪೂರ್ವ-ಕ್ಲಿನಿಕಲ್ ಹಂತದ ಅಧ್ಯಯನ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net