

ಮಂಗಳೂರು : ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಜ್ಮಾನ್‌ನಲ್ಲಿರುವ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಅಲ್ ಜುರ್ ಕ್ಯಾಂಪಸ್‌ನಲ್ಲಿ 700 ಹೊಸ ವೈದ್ಯಕೀಯ ವತ್ತಿಪರರು ವೈಟ್ ಕೋಟ್ ಸಮಾರಂಭದಲ್ಲಿ ಪಾಲ್ಗೊಂಡು ಪ್ರತಿಜ್ಞಾವಿಧಿಯಲ್ಲಿ ಭಾಗವಹಿಸಿದರು. ಹೊಸ ವತ್ತಿಪರರು ರೋಗಿಗಳ ಆರೋಗ್ಯ ಸೇವೆಯ ತಮ್ಮ ಬದ್ಧತೆಯ ಕುರಿತು ಪ್ರತಿಜ್ಞೆ ಸ್ವೀಕರಿಸಿದರು.
102 ವಿವಿಧ ರಾಷ್ಟ್ರೀಯತೆಯ 5000 ವಿದ್ಯಾರ್ಥಿಗಳು ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿದ್ದು, ಹೊಸದಾಗಿ 700 ಮಂದಿ ಸೇರ್ಪಡೆಯಾಗಿದ್ದಾರೆ. ಒಟ್ಟು ಆರು ಕಾಲೇಜುಗಳಲ್ಲಿ ವಿವಿಧ ಆರೋಗ್ಯ ಸೇವಾ ಕೋರ್ಸ್‌ಗಳನ್ನು ಅವರು ಅಭ್ಯಸಿಸಲಿದ್ದಾರೆ. ತಮ್ಮ ಎಂದಿನ ಶೈಕ್ಷಣಿಕ ಪಠ್ಯಕ್ರಮದ ಜತೆಯಲ್ಲೇ ಅವರಿಗೆ ಕತಕ ಬುದ್ಧಿಮತ್ತೆ ಹಾಗೂ ಆರೋಗ್ಯಸೇವಾ ವಲಯದಲ್ಲಿ ಅದರ ಪರಿಣಾಮದ ಬಗ್ಗೆ ಅಧ್ಯಯನ ನಡೆಸುವರು.
ಸಮಾರಂಭದ ಮುಖ್ಯ ಅತಿಥಿಯಾಗಿದ್ದ ತುಂಬೆ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ತುಂಬೆ ಮೊಯ್ದೀನ್ ಮಾತನಾಡಿ ‘ ಹೊಸ ಆರೋಗ್ಯ ವತ್ತಿಪರ ವಿದ್ಯಾರ್ಥಿಗಳು ಮುಂಬರುವ ಭವಿಷ್ಯತ್ತಿನ ಆರೋಗ್ಯ ಸೇವಾ ನಾಯಕರಾಗಲು ಹೊರಟಿದ್ದಾರೆ. ಅವರ ಆಶೋತ್ತರ ಈಡೇರಿಸುವುದಕ್ಕೆ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಸದಾ ಬದ್ಧವಾಗಿದೆ ಎಂದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹೊಸಾಮ್ ಹಮ್ದಿ ಮಾತನಾಡಿ, ಈಗ ವೈದ್ಯಕೀಯ ವೃತ್ತಿಯು ಸಾಕಷ್ಟು ಸುಧಾರಣೆಗೊಳಪಟ್ಟಿದೆ. ವೈದ್ಯಕೀಯ ವಿದ್ಯಾರ್ಥಿಗಳು ಕೂಡಾ ವೃತ್ತಿಪರ ವೈದ್ಯಕೀಯ ತಂಡದ ಭಾಗವೇ ಆಗಿದ್ದು ಕೊಂಡು ತಜ್ಞತೆಯನ್ನು ಪಡೆದುಕೊಳ್ಳುತ್ತಾರೆ ಎಂದರು,.
ಗಲ್ಫ್ ಮೆಡಿಕಲ್ ಯುನಿವರ್ಸಿಟಿಯು ಯುರೋಪ್, ಯುಎಸ್, ಜಪಾನ್, ದೂರ ಪೂರ್ವದ ದೇಶಗಳ 86 ಪ್ರಮುಖ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದ್ದು ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ತರಬೇತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.