ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ

GLD 2
Published on

ಗುಳೇದಗುಡ್ಡ: ಅಂತಿಮ ವರ್ಷ ಪದವಿ ಕಾಲೇಜ್ ಪ್ರಾರಂಭಗೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೆ ಕೋವಿಡ್ ಪರೀಕ್ಷೆ ಮಾಡಲಾಯಿತು.

ಬುಧವಾರ ಸ್ಥಳೀಯ ಭಂಡಾರಿ ಹಾಗೂ ರಾಠಿ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೇರಿದಂತೆ ಒಟ್ಟು 162 ಜನರಿಗೆ ಪರೀಕ್ಷೆ ನಡೆಸಲಾಯಿತು ಎಂದು ಬಾದಾಮಿ ತಾಲೂಕು ಆರೋಗ್ಯಾಧಿಕಾರಿ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಕಾಲೇಜಿಗೆ ತಹಸೀಲ್ದಾರ್ ಜಿ.ಎಂ. ಕುಲಕರ್ಣಿ ಭೇಟಿ ನೀಡಿದ್ದರು. ಬಾದಾಮಿಯ ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯದ ಹಿರಿಯ ತಜ್ಞ ಗುರುರಾಜ ಮಂಕಣಿ, ಕಿರಿಯ ತಜ್ಞ ರಾಮು ರಾಠೋಡ, ಸಂಗಮೇಶ ಮೇಟಿ, ಕಿರಿಯ ಆರೋಗ್ಯ ಸಹಾಯಕರಾದ ಎ.ಎಲ್. ಬಡಿಗೇರ, ಪ್ರಶಾಂತ ಕೆಲೂಡಿ, ಎಂ.ಪಿ. ಪಾಗದ ಮತ್ತಿತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net