ಗುಳೇದಗುಡ್ಡ ತಾಲೂಕು ದರ್ಶನ ಗ್ರಂಥ ಬಿಡುಗಡೆ ನಾಳೆ

Guledagudda taluk Darshan, book release,
ಗುಳೇದಗುಡ್ಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿದರು. ಅಶೋಕ ಹೆಗಡೆ, ಸಂಜಯ ಬರಗುಂಡಿ, ಸಂಗಪ್ಪ ಹುನಗುಂದ ಇತರರಿದ್ದರು.
Published on

ಗುಳೇದಗುಡ್ಡ: ತಾಲೂಕಿನ ಭೌಗೋಳಿಕ, ರಾಜಕೀಯ, ಐತಿಹಾಸಿಕ, ಸಾಮಾಜಿಕ ಹಾಗೂ ಸಂಸ್ಕೃತಿ ಪರಿಚಯಿಸುವ ಅಶೋಕ ಹೆಗಡೆ ಅವರು ರಚಿಸಿದ ಗುಳೇದಗುಡ್ಡ ತಾಲೂಕು ದರ್ಶನ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮವನ್ನು ಗುಳೇದಗುಡ್ಡ ತಾಲೂಕು ಹೋರಾಟ ಸಮಿತಿಯಿಂದ ಆ.27 ರಂದು ಬೆಳಗ್ಗೆ 10 ಗಂಟೆಗೆ ಸ್ಥಳೀಯ ಕರನಂದಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.

ನೂತನವಾಗಿ ರಚಿತವಾದ ಗುಳೇದಗುಡ್ಡ ತಾಲೂಕಿನ ಸಮಗ್ರ ಮಾಹಿತಿ ಒಳಗೊಂಡಿರುವ ಗುಳೇದಗುಡ್ಡ ತಾಲೂಕು ದರ್ಶನ ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಸ್ಥಳೀಯ ಜಗದ್ಗುರು ಗುರುಸಿದ್ಧೇಶ್ವರ ಮಠದ ಬಸವರಾಜ ಪಟ್ಟದಾರ್ಯ ಸ್ವಾಮಿಗಳು, ಮುರುಘಾಮಠದ ಕಾಶೀನಾಥ ಸ್ವಾಮಿಗಳು ವಹಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಲೂಕು ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ರಾಜಶೇಖರ ಶೀಲವಂತ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಮಾಜಿ ಸಚಿವ ಮುರುಗೇಶ ನಿರಾಣಿ ಗ್ರಂಥ ಲೋಕಾರ್ಪಣೆ ಮಾಡುವರು. ವಿಶ್ರಾಂತ ಪ್ರಾಚಾರ್ಯ ಸಿದ್ದಲಿಂಗಪ್ಪ ಬರಗುಂಡಿ ಪುಸ್ತಕದ ವಿಮರ್ಶೆ ಮಾಡುವರು. ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಎಚ್.ವೈ.ಮೇಟಿ, ಭೀಮಸೇನ ಚಿಮ್ಮನಕಟ್ಟಿ, ಮಾಜಿ ಸಚಿವ ಎಸ್.ಆರ್. ಪಾಟೀಲ, ಮಾಜಿ ಶಾಸಕರಾದ ಎಸ್.ಜಿ.ನಂಜಯ್ಯನಮಠ, ಎಂ.ಕೆ.ಪಟ್ಟಣಶೆಟ್ಟಿ, ಎಂ.ವಿ.ಬನ್ನಿ, ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹನುಮಂತ ಮಾವಿನಮರದ, ಕಸಾಪ ಅಧ್ಯಕ್ಷ ಎಚ್.ಎಸ್.ಘಂಟಿ ಮತ್ತಿತರರು ಉಪಸ್ಥಿತರಿರುವರು. ಗುಳೇದಗುಡ್ಡ ತಾಲೂಕು ಹೋರಾಟದಲ್ಲಿ ಪಾಲ್ಗೊಂಡಿದ್ದ 49 ಮ್ಯಾಳ, ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದಲ್ಲಿ2 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಕರವೇ ಸಂಘಟನೆ ಮುಖಂಡ ಶ್ರೀಕಾಂತ ಹುನಗುಂದ ಮಾತನಾಡಿ, ಸಂಜೆ 5.30 ರಿಂದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಸರ್ಕಾರಿ ಶಾಲೆ, ಕಾಲೇಜಿನ ಶಿಕ್ಷಕರ ಮಕ್ಕಳು ಹಾಗೂ ಶಿಕ್ಷಕರನ್ನು ವಿಶೇಷವಾಗಿ ಕರವೇ ವತಿಯಿಂದ ಸನ್ಮಾನಿಸಲಾಗುವುದು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗ್ರಂಥಕರ್ತ ಅಶೋಕ ಹೆಗಡೆ, ಸಂಜಯ ಬರಗುಂಡಿ, ಸಂಗಪ್ಪ ಹುನಗುಂದ, ಚಿದಾನಂದಸಾ ಕಾಟವಾ, ಕಮಲಕಿಶೋರ ಮಾಲಪಾಣಿ, ಕಾಶಿವಿಶ್ವನಾಥ ಶೆಟ್ಟರ, ಗೋಪಾಲ ಭಟ್ಟಡ, ಪ್ರಶಾಂತ ಜವಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net