ಶಿಕ್ಷಕಿ ಅನ್ನಪೂರ್ಣಗೆ ಸನ್ಮಾನ

GLD-16-1
Published on

ಗುಳೇದಗುಡ್ಡ: ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ತಾಲೂಕು ಘಟಕದ 2020-25ನೇ ಸಾಲಿನ ಕಾರ್ಯಕಾರಿಣಿ ಸಮಿತಿಗೆ ಸದಸ್ಯರಾಗಿ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಅವಿರೋಧವಾಗಿ ಇತ್ತೀಚೆಗೆ ಆಯ್ಕೆಯಾದ ಗುಳೇದಗುಡ್ಡದ ಶಾಸಕರ ಸರ್ಕಾರಿ ಮಾದರಿ ಶಾಲೆ ಸಹಶಿಕ್ಷಕಿ ಅನ್ನಪೂರ್ಣ ಬಿ. ಅವರನ್ನು ಸನ್ಮಾನಿಸಲಾಯಿತು.

ಪಟ್ಟಣದ ಶಾಲೆ ಶಿಕ್ಷಕರ ಸಹಕಾರಿ ಸಂಘದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅನ್ನಪೂರ್ಣ ಬಿ. ಅವರನ್ನು ಸನ್ಮಾನಿಸಲಾಯಿತು. ತಾಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಪಿ. ಮಾಚಾ, ಜಿಲ್ಲಾ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಉಪಾಧ್ಯಕ್ಷ ವಿ.ಕೆ. ಪತ್ತಾರ, ವಿ.ಪಿ. ದಾಸರ, ವೈ.ಜಿ. ತಳವಾರ, ವೈ.ಎಸ್. ಮಜ್ಜಗಿ, ನಾಗರಾಜ ಎಚ್., ಸಣ್ಣವೀರಣ್ಣ ಯಲಿಗಾರ, ಕಿರಣ ನಿಲುಗಲ್ಲ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net